ಶ್ರೀ ಉಳಾಳ್ತಿ ಗೆಳೆಯರ ಬಳಗದಿಂದ ನಾರಾಯಣ ಶೆಟ್ಟಿ ನಿಸರ್ಗ ಅವರಿಗೆ ₹28,500 ನೆರವು

0

ಶ್ರೀ ಉಳಾಳ್ತಿ ಗೆಳೆಯರ ಬಳಗದ 44ನೇ ಸೇವಾ ಯೋಜನೆಯಡಿ, ರಸ್ತೆ ಅಪಘಾತದಲ್ಲಿ ಗಾಯಗೊಂಡು ಆರ್ಥಿಕ ಸಂಕಷ್ಟದಲ್ಲಿರುವ ಬಳಗದ ಸದಸ್ಯ ನಾರಾಯಣ ಶೆಟ್ಟಿ ನಿಸರ್ಗ ಅವರಿಗೆ ₹28,500 ಮೊತ್ತದ ಧನಸಹಾಯ ನೀಡಲಾಯಿತು.ರಸ್ತೆ ಅಪಘಾತದಲ್ಲಿ ಮೂಳೆ ಮುರಿತಕ್ಕೊಳಗಾದ ನಾರಾಯಣ ಶೆಟ್ಟಿ ಅವರು ಶಸ್ತ್ರಚಿಕಿತ್ಸೆ ಪಡೆದು ಸದ್ಯ ವಿಶ್ರಾಂತಿಯಲ್ಲಿದ್ದಾರೆ.

ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಅವರಿಗೆ ಬಳಗದ ವತಿಯಿಂದ ಸಂಗ್ರಹಿಸಿದ ನೆರವಿನ ಮೊತ್ತದ ಚೆಕ್ ಅನ್ನು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸದಾಶಿವ ಕಕ್ಕಿಂಜೆ ಅವರ ಮೂಲಕ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬಳಗದ ಕಾರ್ಯದರ್ಶಿ ನಾರಾಯಣ ಶೆಟ್ಟಿ ಕುಡೆಂಚ, ಸನತ್ ಕುಮಾರ್ ಮೂರ್ಜೆ ಹಾಗೂ ದಿವಾಕರ ಪೂಜಾರಿ ಬೀಜದಪಳಿಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here