ಸಮುದ್ರಕ್ಕೆ ಈಜಲು ಹೋದ ಬೆಳ್ತಂಗಡಿ ಬಾಲಕ ಶ್ರೇಯಸ್ ನೀರುಪಾಲು: ಮೃತದೇಹ ಪತ್ತೆ

0

ಬೆಳ್ತಂಗಡಿ: ಬೆಳ್ತಂಗಡಿ ಖಾಸಗಿ ಶಾಲಾ 9ನೇ ತರಗತಿ ವಿದ್ಯಾರ್ಥಿ ಶ್ರೇಯಸ್ (15ವರ್ಷ) ಮಂಗಳೂರು ಪಣಂಬೂರು ಸಮುದ್ರಕ್ಕೆ ಅ.4ರಂದು ಸಂಜೆ ಈಜಲು ಹೋಗಿದ್ದು ನೀರು ಪಾಲಾಗಿರುವ ಘಟನೆ ನಡೆದಿದ್ದು ಈ ಕುರಿತಾಗಿ ಶೋಧ ಕಾರ್ಯಾಚರಣೆ ಮುಂದುವರೆದು ಇಂದು(ಅ. 6)ಸಂಜೆ ಶ್ರೇಯಸ್ ಅವರ ಮೃತದೇಹ ಉಡುಪಿ ಜಿಲ್ಲೆಯ ಕಾಪು ಹೆಜಮಾಡಿಯಲ್ಲಿ ಪತ್ತೆಯಾಗಿದೆ ಪತ್ತೆಯಾಗಿದೆ.

ದೂರಿನಲ್ಲಿರುವ ವಿವರ : ಬೆಳ್ತಂಗಡಿ ತಾಲ್ಲೂಕಿನ ರೆಂಕೆದಗುತ್ತು, ಕಸಬಾ ಗ್ರಾಮ ಮೂಲದ ಶ್ರೇಯಸ್ ಎಸ್. ಕುಂಬಾರ (14 ವರ್ಷ) ಎಂಬಾತನು ತನ್ನ 04 ಜನ ಅಪ್ರಾಪ್ತ ಸ್ನೇಹಿತರ ಜೊತೆ ದಿನಾಂಕ: 04-10-2026 ರಂದು ಬೆಳಿಗ್ಗೆ ಸುಮಾರು 10:00 ಗಂಟೆಗೆ ದಸರಾ ಹಬ್ಬದ ಪ್ರಯುಕ್ತ ಮಂಗಳೂರಿನಲ್ಲಿ ಹುಲಿ ವೇಷ ಹಾಕುವ ತರಬೇತಿಗಾಗಿ ಮಂಗಳೂರಿಗೆ ಬಂದವರು ತರಬೇತಿ ಮುಗಿದ ನಂತರ ಶ್ರೇಯಸ್ ಹಾಗೂ ಆತನ ಸ್ನೇಹಿತರು ಸ್ಟೇಟ್ ಬ್ಯಾಂಕ್ ನಿಂದ ಪಣಂಬೂರು ಬೀಚ್ ಗೆ ಬಂದು, ಸಂಜೆ ಸುಮಾರು 4:30 ರಿಂದ 5:00 ಗಂಟೆಗೆ ಕೂರಿಕಟ್ಟ ಸಮುದ್ರ ಕಿನಾರೆಗೆ ತೆರಳಿದ್ದು. ಸಂಜೆ ಸುಮಾರು 6:00 ಗಂಟೆಗೆ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಶ್ರೇಯಸ್ ನೀರಿನಲ್ಲಿ ಮುಳುಗಿ, ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ನೀರಿನಲ್ಲಿ ಮುಳುಗಿ ಕಾಣೆಯಾಗಿರುತ್ತಾರೆ.

ಈತನು ಕಾಣೆಯಾದ ವಿಷಯವನ್ನು ಆತನ ಅಪ್ರಾಪ್ತ ಸ್ನೇಹಿತರು ಭಯಗೊಂಡು ಶ್ರೇಯಸ್ ನ ಮನೆಯವರಿಗೆ ತಿಳಿಸದೇ ಇದ್ದು, ಈ ದಿನ ದಿನಾಂಕ: 05-10-2026 ರಂದು ಬೆಳಿಗ್ಗೆ ಶ್ರೇಯಸ್ ಮನೆಯವರಿಗೆ ಮಾಹಿತಿ ತಿಳಿಸಿದ್ದು, ಅದರಂತೆ ಕಾಣೆಯಾದ ಬಾಲಕನ ತಂದೆ ಸೇಷಪ್ಪ ರವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 127/2026 ಕಲಂ; ಮನುಷ್ಯ ಕಾಣೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಕಾಣೆಯಾದ ಬಾಲಕನ ಪತ್ತೆಯ ಬಗ್ಗೆ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಮತ್ತು ಸಮುದ್ರ ವ್ಯಾಪ್ತಿ ಹೊಂದಿರುವ ಠಾಣೆಗಳಿಗೆ ಮಾಹಿತಿ ನೀಡಿ ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ, ಹಾಗೂ ಲೈಫ್ ಗಾರ್ಡ್, ಮುಳುಗು ತಜ್ಞರು ಮತ್ತು ಸ್ಥಳೀಯ ಮೀನುಗಾರರ ಮೂಲಕ ಪತ್ತೆ ಕಾರ್ಯ ಮುಂದುವರಿಸಲಾಗಿದೆ ಎಂದು ದೂರಿನಲ್ಲಿ ದಾಖಲಿಸಲಾಗಿತ್ತು.

LEAVE A REPLY

Please enter your comment!
Please enter your name here