






ಬೆಳ್ತಂಗಡಿ: ಕನ್ನಾಜೆ ಶ್ರೀ ದುರ್ಗಾ ಭಜನಾ ಮಂದಿರ ನವರಾತ್ರಿ ಭಜನಾ ಮಂಗಳೋತ್ಸವದ ಪ್ರಯುಕ್ತ ಆಟೋಟ ಸ್ಪರ್ಧೆಗಳ ಉದ್ಘಾಟನೆ ಅ.4 ರಂದು ನಡೆಯಿತು. ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ನಿವೃತ್ತ ಯೋಧ ಸುಬೆದಾರ್ ಮೇಜರ್ ಶಿವಕುಮಾರ್ ಮಾಡಿದರು. ಬಳಿಕ ಮಾತನಾಡಿದ ಅವರು ಕ್ರೀಡೆಯಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಲು ಸಹಕಾರಿಯಾಗುತ್ತದೆ. ಮತ್ತು ಊರಿನಲ್ಲಿ ಇತಂಹ ಕ್ರೀಡೆ ಮಾಡುವುದರಿಂದ ಬಲಿಷ್ಠ ಮತ್ತು ಸದೃಢವಾಗಲು ಇದು ಪ್ರೇರಣೆ ಆಗುತ್ತಾದೆ ಎಂದು ಹೇಳಿದರು.
ಜಗನ್ನಾಥ್ ಶೆಟ್ಟಿ ಕರ್ನೋಡಿ ಮಾತನಾಡಿ, ಕನ್ನಾಜೆಯಲ್ಲಿ ಹಲವು ಉತ್ತಮ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತೀರಿ.ನವರಾತ್ರಿ ಹಬ್ಬದ ಪ್ರಯುಕ್ತಆಯೋಜನೆ ಮಾಡಿರುವ ಆಟೋಟ ಸ್ಪರ್ಧೆ ಉತ್ತಮ ಕಾರ್ಯಕ್ರಮ ಎಂದು ಹೇಳಿದರು.


ಮುಖ್ಯ ಅತಿಥಿಗಳಾಗಿ ಸುಮುಖ ಕರ್ನೋಡಿ, ಸದಾನಂದ ಶೆಟ್ಟಿ, ಲಕ್ಷ್ಮಣ ಸಫಲ್ಯ ಉಜಿರೆ, ಚಂದ್ರಶೇಖರ ಆಚಾರ್ಯ ಕನ್ನಾಜೆ, ಜಗನ್ನಾಥ ಶೆಟ್ಟಿ ಕರ್ನೋಡಿ, ರಾಜೇಶ್ ಪವರ್ ಮ್ಯಾನ್ ಕಲ್ಲಗುಡ್ಡೆ, ರುಕ್ಮಯ್ಯ ಆಚಾರ್ಯ ಕನ್ನಾಜೆ, ಗಣೇಶ್ ಕನ್ನಾಜೆ, ರಾಧಾ ಲಾಯಿಲ ಉಪಸ್ಥಿತರಿದ್ದರು.
ಅಧ್ಯಕ್ಷ ಜಗದೀಶ್ ಕನ್ನಾಜೆ ಪ್ರಾಸ್ತಾವಿಕ ಮಾತುಗಳ ಮೂಲಕ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.









