ಸರ್ವಾಂಗಾಸನದಲ್ಲಿ ವಿಶ್ವ ದಾಖಲೆ: ಯೋಗ ಪಟು ವಿಕಾಸ್‌ಗೆ ಶಾಸಕ ಹರೀಶ್ ಪೂಂಜಾರಿಂದ ಸನ್ಮಾನ

0

ಬೆಳ್ತಂಗಡಿ: ಸರ್ವಾಂಗಾಸನದಲ್ಲಿ ನಿರಂತರ ಆಸನ ನಿರ್ವಹಿಸಿ ‘ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ನಿಂದ ವಿಶ್ವ ದಾಖಲೆ ಮಾನ್ಯತೆ ಪಡೆದ ಬೆಳ್ತಂಗಡಿ ಮೂಲದ ಯೋಗ ಪಟು ಪಿ.ಕೆ. ವಿಕಾಸ್ ಅವರನ್ನು ಶಾಸಕ ಹರೀಶ್ ಪೂಂಜಾ ಭೇಟಿ ಮಾಡಿ ಗೌರವಿಸಿದರು.

ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸಸ್‌ನ ತೃತೀಯ ವರ್ಷದ ವಿದ್ಯಾರ್ಥಿಯಾಗಿರುವ ವಿಕಾಸ್, 5ನೇ ತರಗತಿಯಿಂದಲೇ ಯೋಗಾಭ್ಯಾಸ ಆರಂಭಿಸಿ 11 ವರ್ಷಗಳಿಂದ ನಿರಂತರ ಸಾಧನೆ ಮಾಡುತ್ತಿದ್ದಾರೆ. ಸರ್ವಾಂಗಾಸನದಲ್ಲಿ ಸಮತೋಲನ, ನಮ್ಯತೆ, ಸ್ಥಿರತೆ, ಏಕಾಗ್ರತೆ ಹಾಗೂ ಸಹನಶಕ್ತಿ ಪ್ರದರ್ಶಿಸಿರುವುದಾಗಿ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.

ವಿಕಾಸ್ ಈ ಹಿಂದೆ ರಾಜೀವ್ ಗಾಂಧಿ ಆರೋಗ್ಯ ವಿವಿ ಸ್ಪರ್ಧೆಗಳಲ್ಲಿ ದ್ವಿತೀಯ, ಡಬ್ಲ್ಯುಎಫ್‌ಎಫ್ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ, ಏಮ್ಸ್ ನವದೆಹಲಿ ಹಾಗೂ ಹೈದರಾಬಾದ್ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ.

ಇವರು ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಪಂರ್ದಗುತ್ತು ಕೃಷ್ಣಪ್ಪ ಪೂಜಾರಿ ಹಾಗೂ ಬಾರ್ಯ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶೀಲಾ ಎಸ್. ಅವರ ಪುತ್ರ.ಸಾಧನೆಯನ್ನು ಗುರುತಿಸಿ ಶಾಸಕ ಹರೀಶ್ ಪೂಂಜಾ ಅವರು ವಿಕಾಸ್ ಅವರ ಮನೆಗೆ ಭೇಟಿ ನೀಡಿ ಅಭಿನಂದಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here