






‘ಕೊಕ್ಕಡ: ಕೃಷಿ ಜಾಗರಣ್ ಆಯೋಜಿಸುವ ‘ಮಿಲಿನಿಯರ್ ಫಾರ್ಮರ್ ಆಫ್ ಇಂಡಿಯಾ’ (ಎಂಎಫ್‌ಒಐ) ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಕಲಾಯಿ ಮನೆಯ ಪ್ರಗತಿಪರ ಕೃಷಿಕ ಗಣೇಶ್ ಗೌಡ ಅವರ ಹೆಸರು ಶಿಫಾರಸುಗೊಂಡಿದೆ.


ಅಡಿಕೆ ಕೃಷಿಯಲ್ಲಿ ಸಾಧನೆ ಮಾಡಿರುವ ಗಣೇಶ್ ಗೌಡ ಅವರನ್ನು ಯಶಸ್ವಿ ಅಡಿಕೆ ಬೆಳೆಗಾರರಾಗಿ ಗುರುತಿಸಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಕೃಷಿ ಕ್ಷೇತ್ರದಲ್ಲಿನ ಸಾಧನೆ ಹಾಗೂ ನಾವೀನ್ಯತೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.
ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್) ಸಹ ಪ್ರಾಯೋಜಕತ್ವ ಹೊಂದಿರುವ ಈ ಪ್ರಶಸ್ತಿ ಕಾರ್ಯಕ್ರಮದಲ್ಲಿ ವಿವಿಧ ಮಾನದಂಡಗಳ ಆಧಾರದಲ್ಲಿ ಕೃಷಿಕರನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಸಾಧಕ ಕೃಷಿಕರಿಗೆ ಡಿಸೆಂಬರ್ ಮೊದಲ ವಾರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.









