ಭಾರತ-ಭೂತಾನ್ ಸ್ನೇಹ ಶಿಬಿರಕ್ಕೆವೇಣೂರಿನ ನಿಶಾ ಪೂಜಾರಿ ಆಯ್ಕೆ

0

ವೇಣೂರು: ವೇಣೂರು ವಿವಾಸಿ ಮೂಡಬಿದ್ರೆ ಆಳ್ವಾಸ್ ಸ್ವಾಯತ್ತ ಕಾಲೇಜಿನ ಎನ್‌ಸಿಸಿ ಆರ್ಮಿ ವಿಂಗ್‌ನ ಕೆಡೆಟ್ ನಿಶಾ ಪೂಜಾರಿ ಬರುವ ನವೆಂಬರ್ ತಿಂಗಳಲ್ಲಿ ಭೂತಾನ್ ದೇಶದಲ್ಲಿ ನಡೆಯಲಿರುವ ಭಾರತ – ಭೂತಾನ್ ಯುವ ಸ್ನೇಹ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.

ಕರ್ನಾಟಕದಿಂದ ಆಯ್ಕೆಯಾಗಿರುವ ನಾಲ್ವರು ಕೆಡೆಟ್‌ಗಳಲ್ಲಿ ನಿಶಾ ಅವರೂ ಒಬ್ಬರು. ಅವರು 2026ರ ಗಣರಾಜ್ಯೋತ್ಸವ ಶಿಬಿರದಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಅಚೀವ್‌ಮೆಂಟ್ ಪುರಸ್ಕಾರಕ್ಕೆ ಸರದಿಯಲ್ಲಿ ಹಾಗೂ ನವದೆಹಲಿ ವೀಕ್ ಭಾರತ ಶ್ರೇಷ್ಠ ಭಾರತ ಶಿಬಿರ, ಜನವರಿ ಶಿಬಿರ ಹಾಗೂ ಆರ್ಟ್ ಡಿಸಿ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಎನ್‌ಸಿಸಿ ಶಿಬಿರಗಳಲ್ಲಿ ತೋರಿದ ಸಾಧನೆಯಿಂದ ಈ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.

ವೇಣೂರಿನ ನಂದಿತಾ ಹಾಗೂ ನಾರಾಯಣ ಪೂಜಾರಿ ದಂಪತಿಯ ಪುತ್ರಿಯಾಗಿರುವ ನಿಶಾ ಪೂಜಾರಿ ಪ್ರಸ್ತುತ ಆಳ್ವಾಸ್ ಸ್ವಾಯತ್ತ ಕಾಲೇಜಿನಲ್ಲಿ ತೃತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here