ಎಸ್.ಐ.ಆರ್ ಫಾರಂ7 ನ್ನು ದುರುಪಯೋಗ, ಸುಳ್ಳುದಾಖಲೆ ನೀಡಿ ಮತದಾನದ ಹಕ್ಕನ್ನು ಕಸಿಯಲು ಯತ್ನಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಶೀಲ್ದಾರ್ ಹಾಗೂ ಪೊಲೀಸ್ ಠಾಣೆಗೆ ದೂರು

0

ಬೆಳ್ತಂಗಡಿ: ಬೆಳ್ತಂಗಡಿ: ಎಸ್‌ಐಆರ್ ಫಾರಂ-7 ಮೂಲಕ ಬೆಳ್ತಂಗಡಿವಿಧಾನಸಭಾ ಕ್ಷೇತ್ರದ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯಗಳ ಅರ್ಹ ಮತದಾರರ ಹೆಸರುಗಳನ್ನು ಅಕ್ರಮವಾಗಿ ಅಳಿಸಿರುವ ಆರೋಪದ ಕುರಿತು, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಅ.3. ಬೆಳ್ತಂಗಡಿ ತಹಸೀಲ್ದಾರ್ ಎಸ್. ಎನ್ ನರಗುಂದ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಯಿತು.

ಮನವಿಯಲ್ಲಿ ಏನಿದೆ:ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 47 ರಲ್ಲಿ ಉಮೇಶ್ ಬಂಗೇರ ಮತಗಟ್ಟೆಸಂಖ್ಯೆ 53 ರಲ್ಲಿ ಗಣೇಶ್ ಕರ್ಕೇರ, ಮತಗಟ್ಟೆ ಸಂಖ್ಯೆ 54 ರವಿ ಕುಲಾಲ್, ಮತಗಟ್ಟೆ ಸಂಖ್ಯೆ 109 ರಲ್ಲಿ ಬಾಲಕೃಷ್ಣ ಶೆಟ್ಟಿ ಗೀತಾ, ಸುಧಾಕರ ಮತಗಟ್ಟೆ ಸಂಖ್ಯೆ 122 ರಲ್ಲಿಯಶವಂತ ಕುಮಾರ್ ಡಿ. ಚಂದ್ರಹಾಸ, ಭಾಸ್ಕರ, ಪೂರ್ಣಕ್ಷ ಬಿ. ಮತಗಟ್ಟೆ ಸಂಖ್ಯೆ 123 ರಲ್ಲಿ ಉಮರ್, ಪುತ್ತೂ ಮೋನು, ಮತಗಟ್ಟೆ ಸಂಖ್ಯೆ 124 ರಲ್ಲಿ ಸಂತೋಷ ಗುಂಪಲಾಜಿ, ಮತಗಟ್ಟೆ ಸಂಖ್ಯೆ 185,186,187,188 ರಲ್ಲಿ ಯಶವಂತ ಗೌಡ, ನಿತ್ಯಾನಂದ ಗೌಡ ಹಾಗೂ ಪೂರ್ಣಕ್ಷ ಪೂಜಾರಿ ಇವರುಗಳು ಪ್ರಸ್ತುತ ನಡೆಯುತ್ತಿರುವ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅರ್ಹ ಮತದಾನದ ಹಕ್ಕನ್ನು ಕಸಿಯುವ ಸಂಚು ರೂಪಿಸಿರುತ್ತಾರೆ.ಮೇಲೆ ಕಾಣಿಸಿರುವ ವ್ಯಕ್ತಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗುವ ಫಾರಂ 7 (Form 7) ನ್ನು ದುರುಪಯೋಗಪಡಿಸಿಕೊಂಡು, ಮೇಲೆ ಕಾಣಿಸಿರುವ ಮತಗಟ್ಟೆ ಸಂಖ್ಯೆಯ ವಿಳಾಸದಲ್ಲಿ ವಾಸವಾಗಿಲ್ಲ ಸ್ಥಳಾಂತರಗೊಂಡಿದ್ದಾರೆ ಎಂದು ಸುಳ್ಳು ಮಾಹಿತಿ ಹಾಗೂ ನಕಲಿ ದಾಖಲೆಗಳನ್ನು ನೀಡಿ ಸುಳ್ಳು ಫಾರಂ 7ಅರ್ಜಿಯನ್ನು ಸಲ್ಲಿಸಿರುತ್ತಾರೆ.ಈ ಮೂಲಕ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮತದಾರರ ಹೆಸರು ಮತದಾರ ಪಟ್ಟಿಯಿಂದ ಕೈಬಿಡಲ್ಪಡುವಂತೆ ಅರ್ಜಿನಮೂನೆ 7 ರಲ್ಲಿ ಅರ್ಜಿ ಹಾಕಿ ಸಾಂವಿಧಾನಿ ಕಹಕ್ಕನ್ನು ಕಸಿಯುವ ಗಂಭೀರ ಅಪರಾಧವನ್ನು ಎಸಗಿರುತ್ತಾರೆ.

ಚುನಾವಣಾ ಪ್ರಕ್ರಿಯೆಯಲ್ಲಿ ಸುಳ್ಳು ಘೋಷಣೆ ನೀಡುವುದು ಜನ ಪ್ರತಿ ನಿಧಿ ಕಾಯ್ದೆ 1950 ರ ಸೆಕ್ಷನ್ 31 ರ ಅಡಿಯಲ್ಲಿ ಹಾಗೂ ಭಾರತೀಯನ್ಯಾಯಸಂಹಿತೆ (BNS) ಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ (ಸುಳ್ಳು ಸಾಕ್ಷಿ/ಮಾಹಿತಿ ಸೃಷ್ಟಿ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿಗಂಭೀರ ಅಪರಾಧವಾಗಿರುತ್ತದೆ.ಚುನಾವಣಾ ಕಚೇರಿಯಿಂದ ಫಾರಂ 7 ಸಲ್ಲಿಸಿದ ವ್ಯಕ್ತಿಯ ವಿವರಗಳನ್ನು ಪಡೆದು, ಅವರ ವಿರುದ್ಧ ತಕ್ಷಣವೇ ಪ್ರಕರಣ/ಎಫ್.ಐ.ಆರ್ (FIR) ದಾಖಲಿಸಬೇಕು ಮತ್ತು ಸುಳ್ಳು ಮಾಹಿತಿ ನೀಡಿ ವಂಚಿಸಲು ಯತ್ನಿಸಿದ ವ್ಯಕ್ತಿಗಳ ವಿರುದ್ಧ ಸೂಕ್ತ ತ ನಿಖೆ ನಡೆಸಿ ಕಠಿಣ ಕಾನೂನು ಕ್ರಮಕೈಗೊಳ್ಳಲು ತಹಶೀಲ್ದಾರ್ ಎಸ್.ಎನ್ ನರಗುಂದ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಕೆ.ಪಿ.ಸಿ.ಸಿ ರಾಜ್ಯ ಅಲ್ಪಸಂಖ್ಯಾತರ ಘಟಕದ ಪ್ರಧಾನ ಮಂತ್ರಿ ಪ್ರವೀಣ್ ಹಳ್ಳಿಮನೆ, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್ ಲಾಯಿಲ,ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ಅಲ್ಪಸಂಖ್ಯಾತರ ಗ್ರಾಮೀಣ ಅಧ್ಯಕ್ಷ ಸೆಬಾಸ್ಟಿಯನ್ ಕಳೇಂಜ, ರಾಜ್ಯ ಮಹಿಳಾ ಕಾರ್ಯದರ್ಶಿ ಝೀನತ್, ಗ್ರಾಮೀಣ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ನಾರಾಯಣ ಗೌಡ, ಎಸ್.ಸಿ/ಎಸ್.ಟಿ ಘಟಕದ ಗ್ರಾಮೀಣ ಅಧ್ಯಕ್ಷ ನೇಮಿರಾಜ್ ಕಿಲ್ಲೂರು, ಪ್ರಮುಖರಾದ ಲಕ್ಷ್ಮಣ, ಶ್ರೀನಿವಾಸ ಉಜಿರೆ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಯು.ಕೆ. ಮಹಮ್ಮದ್ ಹನೀಫ್ ಉಜಿರೆ, ಯೂತ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಅಝರ್ ನಾವೂರು, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಗೌಡ ಸವಣಾಲು,ಜಯಾನಂದ ಪಿಲಿಕಳ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here