






ಬಂದಾರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಂಟಾಲಪಲ್ಕೆಯಲ್ಲಿ ಗಾಂಧಿ ಜಯಂತಿ ಆಚರಣೆಯ ದಿನದಂದು, ಶಾಲೆಯಲ್ಲಿ ಬೀರ್ ಇಪ್ಪತ್ನಾಲ್ಕು (24) ವರ್ಷಗಳ ಕಾಲ ಅಡುಗೆ ಸಿಬ್ಬಂದಿಯಾಗಿ ನಿಷ್ಠೆಯ ಸೇವೆ ಸಲ್ಲಿಸಿ ನಿವೃತ್ತಿ ಜೀವನಕ್ಕೆ ಕಾಲಿಟ್ಟಿರುವ ಯಮುನಾ ಕುಕ್ಕಿಲ ಅವರಿಗೆ ಭಾವನಾತ್ಮಕ ಬೀಳ್ಕೊಡುಗೆ ಸಮಾರಂಭವನ್ನು ನೆರವೇರಿಸಲಾಯಿತು.
ಕಾರ್ಯಕ್ರಮದ ಮುಖ್ಯಾಂಶಗಳುಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ವಿಶೇಷ ದಿನದಂದು ಹಮ್ಮಿಕೊಳ್ಳಲಾಗಿದ್ದ ಈ ಸತ್ಕಾರ ಸಮಾರಂಭದಲ್ಲಿ ಊರಿನ ಗಣ್ಯರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯವರು ಉಪಸ್ಥಿತರಿದ್ದು, ನಿವೃತ್ತರಾದ ಯಮುನಾ ಅವರ ಸೇವೆಯನ್ನು ಸ್ಮರಿಸಿದರು.


ಕಾರ್ಯಕ್ರಮದಲ್ಲಿ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷರಾದ ಮೋನಪ್ಪ ಗೌಡ ನೆಲ್ಲಿಗೇರು, ಊರಿನ ಹಿರಿಯರಾದ ಲಿಂಗಪ್ಪಗೌಡ ಕುಂಟಾಲಪಲ್ಕೆ, ಮಾಜಿ ಎಸ್‌ಡಿಎಂಸಿ ಅಧ್ಯಕ್ಷರಾದ ರಾಮಣ್ಣಗೌಡ ನೆಲ್ಲಿಗೇರು, ಎಸ್‌ಡಿಎಂಸಿ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣಗೌಡ ನೆಲ್ಲಿಗೇರು ಹಾಗೂ ಉಪಾಧ್ಯಕ್ಷರಾದ ಲಲಿತಾ ಬದ್ಯಾರು ಭಾಗವಹಿಸಿದ್ದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ಗೌಡ ಕೊಡೋಲು, ಮಾಜಿ ಎಸ್‌ಡಿಎಂಸಿ ಸದಸ್ಯರಾದ ಶ್ರೀನಿವಾಸಗೌಡ ಕುಂಟಾಲಪಲ್ಕೆ, ಎಸ್‌ಡಿಎಂಸಿ ಸಮಿತಿಯ ಸರ್ವ ಸದಸ್ಯರು, ಪೋಷಕ ವೃಂದದವರು ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.
ಶಾಲಾ ಸಿಬ್ಬಂದಿ ಭಾಗಿ: ಶಾಲೆಯ ಮುಖ್ಯ ಶಿಕ್ಷಕಿ, ಶಿಕ್ಷಕಿಯರು, ಅಡುಗೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು ನಿವೃತ್ತಿ ಹೊಂದುತ್ತಿರುವ ಯಮುನಾ ಅವರ ಮಗ ಹರೀಶ್ ಗೌಡ ಕುಕ್ಕಿಲ ಕೂಡ ಉಪಸ್ಥಿತರಿದ್ದರು. ಸುದೀರ್ಘ ಕಾಲ ಶಾಲೆಯ ಮಕ್ಕಳ ಹಸಿವು ನೀಗಿಸುವಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಯಮುನಾ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಹಾಗೂ ದೇವರು ಅವರಿಗೆ ಆಯುರಾರೋಗ್ಯ, ಐಶ್ವರ್ಯ ಕರುಣಿಸಲಿ ಎಂದು ಉಪಸ್ಥಿತರೆಲ್ಲರೂ ಮನತುಂಬಿ ಹಾರೈಸಿದರು









