ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಪಡಂಗಡಿ-ವಿಶೇಷ ಗ್ರಾಮ ಸಭೆ

0

ವಿಕಸಿತ ಭಾರತ –ಗ್ಯಾರೆಂಟಿ ಫಾರ್ ರೋಜ್ ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ 2025ರಡಿ 2027-2028ರ ಆಯವ್ಯಯ ಕ್ರೀಯಾಯೋಜನೆ ತಯಾರಿ ಬಗ್ಗೆ ಮತ್ತು ಸ್ವಚ್ಛತಾ ಹೀ ಸೇವಾ-2026 ಪಾಕ್ಷಿಕ ಅಭಿಯಾನದ ಸಮಾರೋಪ ಸಮಾರಂಭ ಹಾಗೂ GPDP ವಿಶೇಷ ಗ್ರಾಮ ಸಭೆಯು ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಜಿಯವರ ಜಯಂತಿಯ ಪುಣ್ಯ ದಿನವಾದ ಇಂದು ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಪಡಂಗಡಿಯಲ್ಲಿ ಜರುಗಿತು.

ಕಾರ್ಯಕ್ರದ ಮೊದಲಿಗೆ ಗ್ರಾಮ ಪಂಚಾಯತ್ ಅವರಣದಲ್ಲಿರುವ ಅಮೃತ ಸರೋವರದ ಅಭಿವೃದ್ಧಿಗೆ ಗೌರವನ್ವಿತ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಭವಾನಿಶಂಕರ್ ಎನ್ ಇವರು ಹಾಜರಿದ್ದ ಗಣ್ಯರ ಸಮಕ್ಷಮದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ನಂತರ ಮಲ್ಲಾಜೆ ಎಂಬಲ್ಲಿ ನಿರ್ಮಾಣವಾಗಿರುವ ಜಲಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕಿನ ಬಳಿ ಹರ್ ಘರ್ ಜಲ್ ಘೋಷಣೆಯನ್ನು ಮಾಡಲಾಯಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ವಚ್ಛತಾ ಹೀ ಸೇವಾ-2026ರ ಅಭಿಯಾನದ ಅಂಗವಾಗಿ ಸ್ವಚ್ಛ ಸಂಕೀರ್ಣದ ಸ್ವಚ್ಛ ವಾಹಿನಿಯಲ್ಲಿ ಗ್ರಾಮಗಳ ದೃಶ್ಯ ಸ್ವಚ್ಛತೆಗಾಗಿ ಸೇವೆ ಸಲ್ಲಿಸುತ್ತಿರುವ ಸ್ವಚ್ಛ ಸೇನಾನಿಗಳಾದ ಶ್ರೀಮತಿ ಕುಸುಮಾವತಿ, ಶ್ರೀಮತಿ ಯಮುನಾ ಮತ್ತು ಸಹಾಯಕರಾದ ಶ್ರೀ ಸಿಪ್ರಿಯಾನ್ ಮೋನಿಸ್ ಇವರನ್ನು ಗೌರವಿಸಲಾಯಿತು. ತನ್ನ ಮನೆ, ವಿದ್ಯಾರ್ಜನೆಗೈಯುತ್ತಿರುವ ಶಾಲೆ ಮತ್ತು ಸಮಾಜದಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಸದುದ್ದೇಶದಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲಾ ಮಕ್ಕಳಿಗೆ ವಿವಿಧ ವಿಭಾಗವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಸಭಾವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಬಹುಮಾನವನ್ನು ವಿತರಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಭವಾನಿಶಂಕರ್ ಎನ್ ಇವರು ಮಾತನಾಡುತ್ತಾ ಸ್ವಚ್ಛತೆಯಲ್ಲಿ ಎಲ್ಲರೂ ಸಕ್ರೀಯವಾಗಿ ತೊಡಗಿಸಿಕೊಂಡಾಗ ಮಾತ್ರ ಗಾಂಧಿ ಕಂಡ ಸ್ವಚ್ಛ ಭಾರತದ ನಿರ್ಮಾಣ ಸಾಧ್ಯ ಎಂದು, ಸರಕಾರವು ಗ್ರಾಮ ಪಂಚಾಯತ್ ಮೂಲಕ ಅನುಷ್ಠಾನಿಸುತ್ತಿರುವ ವಿಬಿ-ಜಿರಾಮ್ಜಿ ಸೇರಿದಂತೆ ಅನೇಕ ಯೋಜನೆಗಳ ಕುರಿತು ಸಂಕ್ಷಿಪ್ತವಾದ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಚರ್ಚಿಸಿ 2027-2028ರ ವಿಬಿ-ಜಿರಾಮ್ಜಿ ಯೋಜನೆಯ ಆಯವ್ಯಯ ಕ್ರಿಯಾಯೋಜನೆ ತಯಾರಿಯನ್ನು ಮತ್ತು ಜಿಪಿಡಿಪಿ ಕ್ರಿಯಾಯೋಜನೆಯನ್ನು ತಯಾರಿಸಲಾಯಿತು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಇವರು ಮಾತನಾಡುತ್ತ ಸ್ವಚ್ಛತೆಯಲ್ಲಿ ಪ್ರತಿಯೊಬ್ಬರ ಜವಾಬ್ಧಾರಿಯನ್ನು ಪ್ರತಿಪಾದಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಶ್ರೀ ಸಂತೋಷ್ ಕುಮಾರ್ ಜೈನ್, ಶ್ರೀ ವಸಂತ ಪೂಜಾರಿ, ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ವಸಂತಿ, ಮಾಜಿ ಸದಸ್ಯರುಗಳಾದ ಶ್ರೀಮತಿ ಶುಭ, ಶ್ರೀಮತಿ ವನಜಾಕ್ಷಿ, ಕುಮಾರಿ ಶಕುಂತಳ, ಶ್ರೀ ಅಶೋಕ್ ಸಪಲ್ಯ, ಶ್ರೀ ಕೃಷ್ಣಪ್ಪ, ವಿಬಿ-ಜಿರಾಮ್ಜಿ ಯೋಜನೆಯ ತಾಂತ್ರಿಕ ಸಹಾಯಕ ಅಭಿಯಂತರರಾದ ಕುಮಾರಿ ಪ್ರಾರ್ಥನಾ, ಪಡಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಸುಂದರ ಪೂಜಾರಿ, ಸಿರಿ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಶ್ರೀಮತಿ ದಿವ್ಯಾ, ಶ್ರೀ ಸುನಿಲ್ ಶೆಟ್ಟಿ, ಶ್ರೀಮತಿ ಹೊನ್ನಮ್ಮ, ಶ್ರೀಮತಿ ಗೀತಾ, ಶ್ರೀಮತಿ ಬಾಲಿಕ, ಕುಮಾರಿ ದೀಕ್ಷಿತಾ, ಗ್ರಾಂಥಪಾಲಕಿ ಶ್ರೀಮತಿ ವಿಮಲ, ಎಮ್ ಬಿ ಕೆ ಶ್ರೀಮತಿ ಶಾಲಿನಿ, ಡಾಟ ಎಂಟ್ರಿ ಆಪರೇಟರ್ ಶ್ರೀ ಸುಶಾಂತ್ ಮತ್ತು ಕಛೇರಿ ಸ್ವಚ್ಛತೆಗಾರರಾದ ಲೀಲಾ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಪುರುಷೋತ್ತಮ್ ಜಿ ಇವರು ಪ್ರಸ್ತಾವನೆಗೈದು, ಸ್ವಾಗತಿಸಿ ಕಾರ್ಯಕ್ರಮ ಸಂಯೋಜಿಸಿದರು.

LEAVE A REPLY

Please enter your comment!
Please enter your name here