






ಬೆಳ್ತಂಗಡಿ : ಉರುವಾಲು ಗ್ರಾಮದ ಪೊಯ್ಯ ನಿನ್ನಿಕಲ್ಲು ನಿವಾಸಿ ಮುಹಮ್ಮದ್ (ಉರುವಾಲು ಪದವು) ಅವರು ಅಕ್ಟೋಬರ್ 1ರಂದು ನಿಧನರಾಗಿದ್ದಾರೆ.


ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮನೆಗೆ ಕರೆತರಲಾಗಿತ್ತು.
ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.









