






ಸರ್ಕಾರಿ ಪ್ರಾಥಮಿಕ ಶಾಲೆ ಅಣಿಯೂರು ಕಕ್ಕಿಂಜೆ ಇದರ ಆಶ್ರಯದಲ್ಲಿ ವಲಯದ ಮಟ್ಟದ ಕ್ರೀಡಾಕೂಟ ಆ 01 ರಂದು ಅಣಿಯೂರು ಕಕ್ಕಿಂಜೆ ಶಾಲೆಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ಹಕೀಂ ವಹಿಸಿದ್ದರು ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜ ಸೇವಕ ಅಲಿಯಾಸ್ ನೆರವೇರಿಸಿದರು.


ಆರ್ಶ್ ಫೌಂಡೇಶನ್ ಮುಖ್ಯಸ್ಥರಾದ ಕಬೀರ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶ್ರಫ್ ತಾಲೂಕು ಮಾತೃ ಸಂಘದ ದೈಹಿಕ ಶಿಕ್ಷಣ ಸಂಘದ ಕಾರ್ಯದರ್ಶಿ ನಿರಂಜನ್ ಮಾತೃ ಸಂಘದ ಕಾರ್ಯದರ್ಶಿ ಕೃಷ್ಣಾನಂದ ಸ್ವಾಗತ ಸಮಿತಿಯ ಅಧ್ಯಕ್ಷ ಇಕ್ಬಾಲ್ ತಾಲೂಕು ಆರೋಗ್ಯ ಇಲಾಖೆಯ ಅಧ್ಯಕ್ಷ ರಶೀದ್ ಶಾಲಾಭಿವೃದ್ಧಿ ಮೇಲುಸ್ತುವಾರಿ ಅಧ್ಯಕ್ಷ ಅಬ್ದುಲ್ ಖಾದರ್ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿಯನ್ನು ಸಿ ಆರ್ ಪಿ ದೇವಸ್ಯ ನೆರವೇರಿಸಿ ಶಾಲಾ ಮುಖ್ಯೋಪಾಧ್ಯಾಯರಾದ ಉಷಾ ಸ್ವಾಗತಿಸಿ ಶಿಕ್ಷಕಿ ಪ್ರಿಯಾ ಧನ್ಯವಾದ ಸಮರ್ಪಿಸಿದರು ಶಿಕ್ಷಕಿ ಮಾಲಾ ಕಾರ್ಯಕ್ರಮ ನಿರೂಪಿಸಿದರು.









