






ವಿದ್ಯಾರ್ಥಿಗಳು ಯಾವುದೇ ಕಾರ್ಯವನ್ನು ನಿರ್ವಹಿಸುವಾಗ ಆತ್ಮವಿಶ್ವಾಸವನ್ನು ಹೊಂದಿರಬೇಕು ಎಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಮುಂಬೈ ಐ.ಐ.ಟಿ ಕಾಲೇಜಿನ ನಿವೃತ್ತ ಪ್ರಾಧ್ಯಪಕರಾದ ಡಾ.ಎ.ಎನ್. ಕುಮಾರ್ ತಿಳಿಸಿದರು.
ಶ್ರದ್ಧೆಯಿಂದ ನಿಯಮಿತವಾದ ವೇಳಾಪಟ್ಟಿಯನ್ನು ಪಾಲಿಸುವುದರಿಂದ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸನ್ನು ಕಾಣಬಹುದು. ಸಾಧಿಸುವ ಛಲ, ನಿರ್ದಿಷ್ಟವಾದ ಗುರಿ, ವಿದ್ಯಾರ್ಥಿಯ ಏಳಿಗೆಗೆ ಬಹುಮುಖ್ಯ ಎಂದರು.ವಿದ್ಯಾರ್ಥಿ ಜೀವನದ ಸಮಯದಲ್ಲಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ದಿನ ಪತ್ರಿಕೆಗಳನ್ನು ಓದುವುದು. ಉತ್ತಮ ಪುಸ್ತಕಗಳ ಅಧ್ಯಯನ, ಅದರಲ್ಲಿರುವ ಉತ್ತಮ ಧನಾತ್ಮಕ ಅಂಶಗಳನ್ನು ಗ್ರಹಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವುದು ಆದ್ಯತೆಯಾಗಿರಬೇಕು ಎಂದು ಅವರು ಸಲಹೆ ನೀಡಿದರು.


ಒಳ್ಳೆಯ ಸ್ನೇಹಿತರ ಸಹವಾಸ, ಧನಾತ್ಮಕ ಚಿಂತನೆ, ಸಾಧಿಸುವ ಛಲ, ಏಕಾಗ್ರತೆ ಇವೆಲ್ಲವನ್ನೂ ಮೈಗೂಡಿಸಿಕೊಂಡಾಗ ಸಾಧನೆಯು ಸಾಧ್ಯವಾಗುತ್ತದೆ.
ವಿದ್ಯಾರ್ಥಿ ಜೀವನದಲ್ಲೇ ಪರೋಪಕಾರ ಬುದ್ಧಿ, ಕಷ್ಟ ಸಹಿಷ್ಣುತೆ ಮತ್ತು ಗುರು ಹಿರಿಯರ ಬಗ್ಗೆ ಅಪಾರವಾದ ನಂಬಿಕೆಯನ್ನು ಹೊಂದಿರಬೇಕು ಎಂದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸುನಿಲ್ಪಂಡಿತ್, ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಚೈತ್ರ ಪ್ರಭು,ಇಂಗ್ಲೀಷ್ ವಿಭಾಗದ ಉಪನ್ಯಾಸಕರಾದ ಶ್ರೀ ಪಾರ್ಶ್ವನಾಥ ಹೆಗ್ಡೆ ಉಪಸ್ಥಿತರಿದ್ದರು.









