






ಕುಪ್ಪೆಟ್ಟಿ: ಪಿಲಿಗೂಡು ಉಪ್ಪಿನಂಗಡಿ ರಸ್ತೆಯ ಗುಂಡಿಗಳ ಬಗ್ಗೆ ಜನರು ನಿತ್ಯ ಕಣ್ಣೀರು,ಆಕ್ರೋಶ ಹೊರ ಹಾಕಿದರೂ,ಮನವಿಗಳ ರಾಶಿಯನ್ನೇ ಸಲ್ಲಿಸಿದರೂ, ಯಾರಿಗೂ ಕಾಣದಾದಾಗ ದೆ.ಸೆ.22ರಂದು ಜನರೇ ವಾಹನ ಸವಾರರ ಜೀವ ರಕ್ಷಣೆಗೆ ಹೊರಟು,ಬಲ್ಲೆ ಸರ್ಕಲ್ ನಿರ್ಮಿಸಿದ್ದರು.


ಕುಪ್ಪೆಟ್ಟಿ ಸಮೀಪ ರಸ್ತೆ ಮದ್ಯೆ ನಿರ್ಮಾಣವಾಗಿರುವ ಮಹಾ ಗುಂಡಿಯಿಂದ ವಾಹನ ಸವಾರರು,ಪ್ರಯಾಣಿಕರನ್ನು ರಕ್ಷಿಸುವ ಸಲುವಾಗಿ ಬಲ್ಲೆ ಸರ್ಕಲ್ ನಿರ್ಮಿಸಿ 9ದಿನ ಕಳೆದರೂ ಇತ್ತ ಕಡೆ ಯಾವ ಜನಪ್ರತಿನಿಧಿ, ಅಧಿಕಾರಿ ನೋಡಿಲ್ಲ.ಬಲ್ಲೆ ಒಣಗಿ ಒಣಗಿ ಅಡರ್ ಆಗಿ ಬದಲಾದರೂ ಯಾರೂ ಗುಂಡಿಯನ್ನೂ ನೋಡುತ್ತಿಲ್ಲ,ಒಣಗಿದ ಅಡರ್ ಬಗ್ಗೆನೂ ಚಿಂತಿಸುತ್ತಿಲ್ಲ. ಇದು ಮತದಾರರು,ಸಾರ್ವಜನಿಕರ ಬಗ್ಗೆ ಅಧಿಕಾರಿ,ಜನಪ್ರತಿನಿಧಿಗಳಿಗೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ.









