ಬೆಳ್ತಂಗಡಿ ಜೆಸಿಐ ಮಂಜುಶ್ರೀ ಯ ಜೆಸಿ ಸುಭಾಷಿಣಿಯವರಿಗೆ ಪ್ರೇರಣಾ ಅವಾರ್ಡ್ 2026

0

ಮಂಗಳೂರಿನ ಜೆಪ್ಪು ಪಾಲೇಮಾರ್ ಸಭಾಭವನದಲ್ಲಿ ನಡೆದ ಜೆಸಿಐ ವಲಯ 15ರ ಟ್ರೇನಿಂಗ್ ಕಾನ್ಫರೆನ್ಸ್ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಪ್ರಶಸ್ತಿ ಪ್ರಧಾನವನ್ನು ವಲಯದ ಅಧಿಕಾರಿಯಾದ ಜೆಸಿ JFS ಸಂತೋಷ್ ಶೆಟ್ಟಿ ಹಾಗೂ ವಲಯದ ಬೇರೆ ಬೇರೆ ವಿಭಾಗದ ನಿರ್ದೇಶಕರುಗಳ ಸಮ್ಮುಖದಲ್ಲಿ ನೀಡಲಾಯಿತು ಈ ಸಂದರ್ಭದಲ್ಲಿ ಬೆಳ್ತಂಗಡಿ ಜೆಸಿಐ ಅಧ್ಯಕ್ಷರು JFD ಜಿತೇಶ್ ಕುಮಾರ್, ನಿಕಟ ಪೂರ್ವ ಅಧ್ಯಕ್ಷರು ಜೆಸಿ ಆಶಾಲತಾ ಪ್ರಶಾಂತ್, ಹಾಗೂ ಸದಸ್ಯರು ಭಾಗವಹಿಸಿದರು.

ಸುಭಾಷಿಣಿಯವರು ಜೆಸಿಐ ಬೆಳ್ತಂಗಡಿ ಯಲ್ಲಿ ಹಲವಾರು ವರ್ಷ ಸದಸ್ಯರಾಗಿದ್ದು ವಲಯದಲ್ಲಿ ಉತ್ತಮ ತರಬೇತುದರಾರಾಗಿದ್ದು ವಿವಿದೆಡೆ ಹಲವಾರು ತರಬೇತಿಗಳನ್ನು ನೀಡಿ ಜನರ ಮನ ಗೆದ್ದಿರುವ ಇವರು ಜೆಸಿಐ ಸಂಸ್ಥೆಯಲ್ಲಿ ಉತ್ತಮ ಸಾಧನೆ ಮಾಡಿರುತ್ತಾರೆ.

ಪ್ರಸ್ತುತ ಇವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಶುಶ್ರೂಷಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ

LEAVE A REPLY

Please enter your comment!
Please enter your name here