ಉಜಿರೆಯಲ್ಲಿ ‘ಪ್ರಕಾಶಾಭಿವಂದನಮ್‌’ಪಿಡಿಒ ನೊಚ್ಚ ಪ್ರಕಾಶ್‌ ಶೆಟ್ಟಿಗೆ ನಾಗರಿಕರಿಂದ ಅಭಿನಂದನೆ

0

ಉಜಿರೆ: ಮಹಾತ್ಮ ಗಾಂಧಿ ಉಜಿರೆ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ನೊಚ್ಚ ಪ್ರಕಾಶ್‌ ಶೆಟ್ಟಿ ಅವರಿಗೆ ಉಜಿರೆ ನಾಗರಿಕರ ವತಿಯಿಂದ ‘ಪ್ರಕಾಶಾಭಿವಂದನಮ್‌’ ಅಭಿನಂದನಾ ಕಾರ್ಯಕ್ರಮ ಬುಧವಾರ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು.

ಪ್ರಕಾಶಾಭಿನಂದನಮ್ ಅಭಿವಂದನಾ ಸಮಿತಿ ಅಧ್ಯಕ್ಷ , ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಯು. ಶರತ್‌ಕೃಷ್ಣ ಪದುವೆಟ್ನಾಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸರ್ಕಾರದ ಉಪಸಭಾಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ.ಎನ್. ವಿಜಯಪ್ರಕಾಶ್ ಅವರು ‘ಪ್ರಕಾಶ ಪರ್ವ’ ಕೃತಿ ಅನಾವರಣಗೊಳಿಸಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಎಂಎಲ್‌ಸಿ ಕೆ. ಪ್ರತಾಪ್‌ಸಿಂಹ ನಾಯಕ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಬಿ.ಎಸ್. ಪ್ರಸಾದ್ , ಉಜಿರೆ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಮಹಾವೀರ ಸೇವಣ್ಣನವರ್ ಉಪಸ್ಥಿತರಿದ್ದರು.

ಉಜಿರೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅಭಿವಂದನಾ ಮಾತುಗಳನ್ನಾಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ನೊಚ್ಚ ಪ್ರಕಾಶ್‌ ಶೆಟ್ಟಿ ಅವರ ಸೇವೆ ಹಾಗೂ ಉಜಿರೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿ ನಾಗರಿಕರ ವತಿಯಿಂದ ಪಿ ಹೆಚ್ ಪ್ರಕಾಶ್ ಶೆಟ್ಟಿ ನೊಚ್ಚ ಹಾಗೂ ಪ್ರವೀಣ ಪಿ ನೊಚ್ಚ ದಂಪತಿಗಳನ್ನು ಗೌರವಿಸಲಾಯಿತು.

ನೊಚ್ಚ ಪ್ರಕಾಶ್‌ ಶೆಟ್ಟಿ ಅಭಿವಂದನ ಸಮಿತಿ ಹಾಗೂ ಉಜಿರೆ ಮಹಾತ್ಮ ಗಾಂಧಿ ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿ ಮತ್ತು ಸಿಬ್ಬಂದಿ ವರ್ಗದ ಸಹಕಾರದಲ್ಲಿ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here