ಉಜಿರೆ : ಶ್ರೀ.ಧ. ಮಂ. ವಸತಿ ಪದವಿ ಪೂರ್ವ ಕಾಲೇಜು.ಕ್ಷೇತ್ರ ಭೇಟಿ ಕಾರ್ಯಕ್ರಮ

0

ಕಾಲೇಜಿನ, ಇಕೋ ಕ್ಲಬ್ ವತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೆಳ್ತಂಗಡಿ ತಾಲ್ಲೂಕಿನ ಕಡಮಾಜೆ ಫಾರ್ಮ್‌ಗೆ ಕ್ಷೇತ್ರ ಭೇಟಿ ಆಯೋಜಿಸಲಾಯಿತು. ಫಾರ್ಮ್‌ನ ಮಾಲೀಕರಾದ ಶ್ರೀ ದೇವಿಪ್ರಸಾದ್ ಕೆ. ಅವರು ವಿದ್ಯಾರ್ಥಿಗಳಿಗೆ ಕೃಷಿ, ಪರಿಸರ ಸಮತೋಲನ ಹಾಗೂ ಸಾವಯವ ಗೊಬ್ಬರದ ಮಹತ್ವದ ಕುರಿತು ಮಾಹಿತಿ ನೀಡಿದರು.

ಪರಿಸರ ಸಂರಕ್ಷಣೆ ಮತ್ತು ಸಾವಯವ ಕೃಷಿಯ ಅಗತ್ಯತೆಯನ್ನು ವಿವರಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕ್ಷೇತ್ರಭೇಟಿಯು ವಿದ್ಯಾರ್ಥಿಗಳಿಗೆ ಕೃಷಿ ಮತ್ತು ಪರಿಸರ ಸಂರಕ್ಷಣೆಯ ಕುರಿತು ಪ್ರಾಯೋಗಿಕ ಜ್ಞಾನ ನೀಡುವಲ್ಲಿ ಸಹಕಾರಿಯಾಯಿತು.ಇಕೋ ಕ್ಲಬ್ ನ ಸಂಯೋಜಕಿ ಹಾಗೂ ಜೀವಶಾಸ್ತ್ರ ವಿಭಾಗ ಮುಖ್ಯಸ್ತೆ ಶ್ರೀಮತಿ ವಾಣಿ ಎಂ. ಎಂ. ಕಾರ್ಯಕ್ರಮ ಸಂಯೋಜಿಸಿದರು.

ಸುಮಾರು 173 ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸುನಿಲ್ ಪಂಡಿತ್ ಮತ್ತು ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here