ಸಾವ್ಯ ಶುಭೋದಯ ಹಿಂದೂ ಸೇವಾ ಟ್ರಸ್ಟ್‌ಗೆ ನೂತನ ಸಾರಥ್ಯ – ಅಧ್ಯಕ್ಷರಾಗಿ ವಿನೀತ್ ಕೋಟ್ಯಾನ್

0

ಸಾವ್ಯw : ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಯಾದ ಶುಭೋದಯ ಹಿಂದೂ ಸೇವಾ ಟ್ರಸ್ಟ್ ಇದರ ನೂತನ ಕಾರ್ಯಕಾರಣಿ ಸಮಿತಿಯ ಮಹಾಸಭೆ ಇತ್ತೀಚೆಗೆ ಸಾವ್ಯದಲ್ಲಿ ಯಶಸ್ವಿಯಾಗಿ ಜರುಗಿತು.ಮುಂಬರುವ ಅವಧಿಗೆ ಸರ್ವಾನುಮತದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ವಿನೀತ್ ಕೋಟ್ಯಾನ್ ಸಾವ್ಯ ಅವರು ಅವಿರೋಧವಾಗಿ ಆಯ್ಕೆಯಾದರು.ಇತರ ಪದಾಧಿಕಾರಿಗಳು:ಕಾರ್ಯದರ್ಶಿ ಸುಕೇಶ್ ಪೂಜಾರಿ, ಉಪಾಧ್ಯಕ್ಷರು ರಂಜಿತ್ ಅರ್ಬಿ ಸಾವ್ಯ, ಸಂತೋಷ್ ಕೋಟ್ಯಾನ್ ಕೊಂಡಸಲೆ, ಜೊತೆ ಕಾರ್ಯದರ್ಶಿಗಳಾಗಿ ಸುಮಂತ್ ಡಿ. ಮತ್ತು ವಿಶಿತ್ ಪೂಜಾರಿ ಸಾಂತ್ಯಾಲ್, ಕೋಶಾಧಿಕಾರಿ ಹರೀಶ್ ಕುಲಾಲ್ ಗುಬೊಟ್ಟು, ಸಂಘಟನಾ ಕಾರ್ಯದರ್ಶಿಗಳಾಗಿ ಅನಿಲ್ ಹೆಗ್ಡೆ, ಪ್ರಕಾಶ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿಗಳಾಗಿ ರೋಹಿತ್ ಕುಲಾಲ್ ಮತ್ತು ಸುಮಂತ್ ಮಿತ್ತಬೆಟ್ಟು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here