






ಬೆಳ್ತಂಗಡಿ, ಸೆ. 26:ಅನುಗ್ರಹ ಎಜುಕೇಶನ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ (ರಿ.) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಗ್ರಹ ಟ್ರೈನಿಂಗ್ ಕಾಲೇಜು, ಬೆಳ್ತಂಗಡಿ ಮತ್ತು ಮುಡಿಪು ವತಿಯಿಂದ ಶಿಕ್ಷಕರು ಹಾಗೂ ಸಿಬ್ಬಂದಿಗಳ ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ “Training for Trainers” ಎಂಬ ವಿಶೇಷ ತರಬೇತಿ ಕಾರ್ಯಕ್ರಮವನ್ನು ಶನಿವಾರ, ಸೆಪ್ಟೆಂಬರ್ 26ರಂದು ಬೆಳ್ತಂಗಡಿಯ ಸಂತೇಕಟ್ಟೆಯ ಶ್ರೀರಾಮ್ ಕಾಂಪ್ಲೆಕ್ಸ್ನಲ್ಲಿರುವ ಅನುಗ್ರಹ ಟ್ರೈನಿಂಗ್ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಯಿತು.
ಬೆಳಿಗ್ಗೆ 9:30ರಿಂದ ಆರಂಭಗೊಂಡ ತರಬೇತಿ ಕಾರ್ಯಕ್ರಮದಲ್ಲಿ ಅನುಗ್ರಹ ಟ್ರೈನಿಂಗ್ ಕಾಲೇಜಿನ ಬೆಳ್ತಂಗಡಿ ಮತ್ತು ಮುಡಿಪು ಶಾಖೆಗಳ ಪ್ರಾಂಶುಪಾಲರು ಹಾಗೂ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿ, ತರಬೇತಿ ಕಾರ್ಯಕ್ರಮದ ವಿವಿಧ ಅಧಿವೇಶನಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಅನುಭವಸಂಪನ್ನ ತರಬೇತುದಾರ ಅಲ್ಫೋನ್ಸ್ ಫ್ರಾಂಕೊ ಅವರಿಂದ ಪ್ರೇರಣಾದಾಯಕ ತರಬೇತಿಕಾರ್ಯಕ್ರಮದ ಮೊದಲ ಅಧಿವೇಶನದಲ್ಲಿ ವಿಶೇಷ ತರಬೇತುದಾರರಾಗಿ ಅಲ್ಫೋನ್ಸ್ ಫ್ರಾಂಕೊ ಅವರು ಭಾಗವಹಿಸಿ ಸಿಬ್ಬಂದಿಗಳಿಗೆ ಪರಿಣಾಮಕಾರಿ ತರಬೇತಿ ನೀಡಿದರು.ಶಿಕ್ಷಕ ವೃತ್ತಿಯಲ್ಲಿ ಅನುಭವ ಹೊಂದಿರುವ ಅವರು ಉತ್ತಮ ಭಾಷಣಗಾರರಾಗಿದ್ದು, ವಿವಿಧ ಸಂಘ-ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ನಾಯಕತ್ವ ಗುಣಗಳು, ಸಮಾಜಮುಖಿ ಚಿಂತನೆ, ಸಂಘಟನಾ ಸಾಮರ್ಥ್ಯ ಹಾಗೂ ಸಾಮಾಜಿಕ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸುವ ಮನೋಭಾವದ ಕುರಿತು ಅವರು ಸಿಬ್ಬಂದಿಗಳಿಗೆ ಪ್ರೇರಣಾದಾಯಕ ವಿಚಾರಗಳನ್ನು ಹಂಚಿಕೊಂಡರು. ಉದ್ಯಮ ಕ್ಷೇತ್ರದಲ್ಲಿಯೂ ಅನುಭವ ಹೊಂದಿರುವ ಅವರು, ಒಬ್ಬ ಶಿಕ್ಷಕ ಕೇವಲ ಪಾಠ ಬೋಧಿಸುವ ವ್ಯಕ್ತಿಯಾಗಿರದೆ, ವಿದ್ಯಾರ್ಥಿಗಳ ವ್ಯಕ್ತಿತ್ವ, ಆತ್ಮವಿಶ್ವಾಸ ಮತ್ತು ಭವಿಷ್ಯವನ್ನು ರೂಪಿಸುವ ಮಾರ್ಗದರ್ಶಿಯಾಗಬೇಕು ಎಂಬ ಸಂದೇಶವನ್ನು ನೀಡಿದರು.
ತರಬೇತಿಯಲ್ಲಿ ಸಂವಹನ ಕೌಶಲ್ಯ, ನಾಯಕತ್ವ, ತಂಡದೊಂದಿಗೆ ಕೆಲಸ ಮಾಡುವ ವಿಧಾನ, ವಿದ್ಯಾರ್ಥಿಗಳ ಮನೋಭಾವವನ್ನು ಅರ್ಥಮಾಡಿಕೊಳ್ಳುವುದು, ತರಗತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹಾಗೂ ಶಿಕ್ಷಕರ ವೈಯಕ್ತಿಕ ಬೆಳವಣಿಗೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಪ್ರಾಯೋಗಿಕ ಹಾಗೂ ಪ್ರೇರಣಾದಾಯಕ ಮಾರ್ಗದರ್ಶನ ನೀಡಲಾಯಿತು.ರಾಜೀವ್ ಬಿ.ಎಚ್. ಅವರಿಂದ ವಿಶಿಷ್ಟ ಎರಡನೇ ಅಧಿವೇಶನಎರಡನೇ ಅಧಿವೇಶನದಲ್ಲಿ ಖ್ಯಾತ ಜಾದೂ ಕಲಾವಿದ, ಉತ್ತಮ ಮಾತುಗಾರ, ರಂಗಭೂಮಿ ಕಲಾವಿದ, ಬರಹಗಾರ, ಲೇಖಕ, ಉದ್ಯಮಿ ಹಾಗೂ ಶಿಕ್ಷಕರಾಗಿ ಅನುಭವ ಹೊಂದಿರುವ ರಾಜೀವ್ ಬಿ.ಎಚ್. ಅವರು ತರಬೇತುದಾರರಾಗಿ ಭಾಗವಹಿಸಿದರು.
ತಮ್ಮ ವಿಶಿಷ್ಟ ಮಾತುಗಾರಿಕೆ, ಕಲಾತ್ಮಕ ಪ್ರದರ್ಶನ ಮತ್ತು ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಸಿಬ್ಬಂದಿಗಳಲ್ಲಿ ಆಸಕ್ತಿ ಹಾಗೂ ಚೈತನ್ಯ ಮೂಡಿಸಿದ ಅವರು, ತರಬೇತಿ ಎನ್ನುವುದು ಕೇವಲ ಮಾತಿನ ಮೂಲಕ ನೀಡುವ ವಿಷಯವಲ್ಲ; ಅನುಭವ, ಪ್ರದರ್ಶನ, ಸಂವಹನ ಮತ್ತು ಸೃಜನಶೀಲತೆಯ ಮೂಲಕವೂ ಪರಿಣಾಮಕಾರಿಯಾಗಿ ಕಲಿಸಬಹುದು ಎಂಬುದನ್ನು ವಿವಿಧ ಚಟುವಟಿಕೆಗಳ ಮೂಲಕ ತಿಳಿಸಿದರು.ಶಿಕ್ಷಕರಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ, ವಿದ್ಯಾರ್ಥಿಗಳೊಂದಿಗೆ ಸ್ನೇಹಪೂರ್ವಕ ಸಂವಹನ ಹಾಗೂ ತರಗತಿಯಲ್ಲಿ ಹೊಸ ರೀತಿಯ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳುವ ಕುರಿತು ಅವರು ವಿಶೇಷವಾಗಿ ಮಾರ್ಗದರ್ಶನ ನೀಡಿದರು.
ಎಂ.ಜಿ. ತಲ್ಹತ್ ಸವಣಾಲು ಅವರ ಅಧ್ಯಕ್ಷತೆ ಹಾಗೂ ಮಾರ್ಗದರ್ಶನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನುಗ್ರಹ ಎಜುಕೇಶನ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ (ರಿ.)ನ ಚೇರ್ಮನ್ ಹಾಗೂ ಅನುಗ್ರಹ ಟ್ರೈನಿಂಗ್ ಕಾಲೇಜಿನ ಮ್ಯಾನೇಜಿಂಗ್ ಡೈರೆಕ್ಟರ್ ಎಂ.ಜಿ. ತಲ್ಹತ್ ಸವಣಾಲು ಅವರು ವಹಿಸಿದ್ದರು.
ಸಂಸ್ಥೆಯ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಬೆಳವಣಿಗೆಯ ಜೊತೆಗೆ ಸಿಬ್ಬಂದಿಗಳ ವೃತ್ತಿಪರ ಅಭಿವೃದ್ಧಿಗೂ ಹೆಚ್ಚಿನ ಮಹತ್ವ ನೀಡುತ್ತಿರುವ ಅವರು, ತರಬೇತಿ ಕಾರ್ಯಕ್ರಮದ ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ಉತ್ಸಾಹ ತುಂಬುವಂತಹ ಮಾರ್ಗದರ್ಶನ ನೀಡಿದರು.


“ಸಂಸ್ಥೆಯ ಬೆಳವಣಿಗೆಯ ಹಿಂದೆ ಉತ್ತಮ ತಂಡದ ಶ್ರಮವಿದೆ. ಪ್ರತಿಯೊಬ್ಬ ಸಿಬ್ಬಂದಿಯ ಜವಾಬ್ದಾರಿ, ಸಮಯಪಾಲನೆ, ಪ್ರಾಮಾಣಿಕತೆ, ವಿದ್ಯಾರ್ಥಿಗಳ ಮೇಲಿನ ಕಾಳಜಿ ಹಾಗೂ ತಂಡದ ಮನೋಭಾವ ಸಂಸ್ಥೆಯ ಯಶಸ್ಸಿಗೆ ಪ್ರಮುಖ ಅಂಶಗಳು” ಎಂಬ ಸಂದೇಶವನ್ನು ನೀಡಿದರು.
ಸಿಬ್ಬಂದಿಗಳು ತಮ್ಮ ಕೆಲಸವನ್ನು ಕೇವಲ ಕರ್ತವ್ಯವೆಂದು ಪರಿಗಣಿಸದೆ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ತಮ್ಮ ಪಾತ್ರವನ್ನು ಅರಿತುಕೊಂಡು ಆಸಕ್ತಿ, ಜವಾಬ್ದಾರಿ ಮತ್ತು ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.
ಸಿಬ್ಬಂದಿಗಳ ಜವಾಬ್ದಾರಿ ಕುರಿತು ಸಂಸ್ಥೆಯ ನಿರ್ದೇಶಕ ಅಬ್ದುಲ್ ಖಾದರ್ ಅವರ ಮಾರ್ಗದರ್ಶನಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಅಬ್ದುಲ್ ಖಾದರ್ ಅವರು ಸಿಬ್ಬಂದಿಗಳ ಕರ್ತವ್ಯ ಹಾಗೂ ಜವಾಬ್ದಾರಿಗಳ ಕುರಿತು ಮಾತನಾಡಿದರು.
ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂಬಂಧ ಬೆಳೆಸುವುದು, ಸಂಸ್ಥೆಯ ನಿಯಮಗಳನ್ನು ಪಾಲಿಸುವುದು, ಸಮಯಪಾಲನೆ, ನೀಡಲಾದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಹಾಗೂ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕೆಂದು ಅವರು ತಿಳಿಸಿದರು.“ಒಬ್ಬರ ಕೆಲಸವನ್ನು ಮತ್ತೊಬ್ಬರು ಗೌರವಿಸಿ, ತಂಡವಾಗಿ ಕೆಲಸ ಮಾಡಿದಾಗ ಮಾತ್ರ ಸಂಸ್ಥೆ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲು ಸಾಧ್ಯ” ಎಂಬ ಸಂದೇಶವನ್ನು ಅವರು ನೀಡಿದರು.
ಪೋಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂವಹನಕ್ಕೆ ಮಹತ್ವಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಮಹಮದ್ ತೌಸೀಫ್ ಕಕ್ಕಿಂಜೆ ಅವರು ಮಾತನಾಡಿ, ವಿದ್ಯಾರ್ಥಿಗಳೊಂದಿಗೆ ಮಾತ್ರವಲ್ಲದೆ ಪೋಷಕರೊಂದಿಗೂ ಉತ್ತಮ ಸಂವಹನವನ್ನು ಬೆಳೆಸುವುದು ಶಿಕ್ಷಣ ಸಂಸ್ಥೆಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಹಾಜರಾತಿ, ತರಬೇತಿ, ಶಿಸ್ತು ಹಾಗೂ ಅವರ ಅಗತ್ಯಗಳ ಕುರಿತು ಪೋಷಕರೊಂದಿಗೆ ನಿಯಮಿತವಾಗಿ ಮತ್ತು ಗೌರವಯುತವಾಗಿ ಸಂವಹನ ನಡೆಸುವ ಅಗತ್ಯವನ್ನು ಅವರು ವಿವರಿಸಿದರು.ವಿದ್ಯಾರ್ಥಿ–ಪೋಷಕ–ಶಿಕ್ಷಕ–ಮ್ಯಾನೇಜ್ಮೆಂಟ್ ನಡುವಿನ ಉತ್ತಮ ಸಮನ್ವಯವೇ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ನೀಡುವುದರ ಜೊತೆಗೆ, ಅವರ ಸಾಮರ್ಥ್ಯವನ್ನು ಗುರುತಿಸಿ ಸರಿಯಾದ ಮಾರ್ಗದರ್ಶನ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.ಪ್ರಮಾಣ ಪತ್ರ ವಿತರಣೆದಿನವಿಡೀ ನಡೆದ ವಿವಿಧ ತರಬೇತಿ ಅಧಿವೇಶನಗಳಲ್ಲಿ ಸಿಬ್ಬಂದಿಗಳು ಉತ್ಸಾಹದಿಂದ ಭಾಗವಹಿಸಿದರು. ತರಬೇತಿಯ ಅಂತ್ಯದಲ್ಲಿ “Training for Trainers” ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಿಬ್ಬಂದಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.ಕಾರ್ಯಕ್ರಮದ ಮೂಲಕ ಸಿಬ್ಬಂದಿಗಳಲ್ಲಿ ಹೊಸ ಉತ್ಸಾಹ, ಆತ್ಮವಿಶ್ವಾಸ, ತಂಡದ ಮನೋಭಾವ ಹಾಗೂ ವೃತ್ತಿಪರ ಜವಾಬ್ದಾರಿಯ ಅರಿವು ಹೆಚ್ಚಿಸುವಲ್ಲಿ ಯಶಸ್ವಿಯಾಯಿತು.
ಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿ ಮತ್ತು ಮುಡಿಪು ಶಾಖೆಗಳಲ್ಲಿ ಗುಣಮಟ್ಟದ ತಾಂತ್ರಿಕ, ವೃತ್ತಿಪರ ಹಾಗೂ ಕೌಶಲ್ಯಾಧಾರಿತ ಶಿಕ್ಷಣದೊಂದಿಗೆ, ಸಿಬ್ಬಂದಿಗಳ ನಿರಂತರ ತರಬೇತಿ ಮತ್ತು ವೃತ್ತಿಪರ ಅಭಿವೃದ್ಧಿಗೂ ಆದ್ಯತೆ ನೀಡುತ್ತಿದೆ. ಇಂತಹ ತರಬೇತಿ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಮತ್ತಷ್ಟು ಉನ್ನತಿಗೇರಿಸುವಲ್ಲಿ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.









