






ಬೆಳಾಲು : ನಿಂತಿಕಲ್ಲು ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ವನ್ನು ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷೆ ಹೇಮಾವತಿ, ಧರ್ಮಸ್ಥಳ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜು , ಆರೋಗ್ಯ ಸಹಾಯಕಿ ಹರಿಣಾಕ್ಷಿ, ಆಶಾ ಕಾರ್ಯಕರ್ತೆ ಶೀಲಾವತಿ, ಸಮಿತಿಯ ಪದಾಧಿಕಾರಿಗಳಾದ ಸುರೇಂದ್ರ ಗೌಡ, ಭವಾನಿ , ಅಶ್ವಥ್, ಹಾಗೂ ಮಕ್ಕಳ ತಾಯಂದಿರು, ಪೋಷಕರು, ಶ್ರೀ ಶಕ್ತಿ ಸದಸ್ಯರು ಸಂಜೀವಿನಿ ಸದಸ್ಯರು ಹಾಗೂ ಪುಟಾಣಿಗಳು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಪೌಷ್ಟಿಕಾಂಶಗಳ ಬಗ್ಗೆ ಡಾ. ಮಂಜು ಅವರು ವಿವರಿಸಿದರು.ಅಂಗನವಾಡಿ ಕಾರ್ಯಕರ್ತೆ ಭಾರತಿ ಕಾರ್ಯಕ್ರಮವನ್ನು ರೂಪಿಸಿದರು.
ಅಶ್ವಿನಿ ಅನಿಸಿಕೆಯನ್ನು ತಿಳಿಸಿದರು. ಶೀಲಾವತಿ ಧನ್ಯವಾದ ನೀಡಿದರು. ಅಂಗನವಾಡಿ ಸಹಾಯಕಿ ಕಾರ್ಯಕ್ರಮದಲ್ಲಿ ಸಹಕರಿಸಿದರು. ಈ ಕಾರ್ಯಕ್ರಮದೊಂದಿಗೆ ಕೃಷ್ಣಾಷ್ಟಮಿ ಕ್ರೈಸ್ತ ಪ್ರಯುಕ್ತ ಮಕ್ಕಳಿಗೆ ಕೃಷ್ಣವೇಶ ಹಾಕಿಸಿ ಮಕ್ಕಳಿಗೆ ಪ್ರೋತ್ಸಾಹ ಬಹುಮಾನವನ್ನು ವಿತರಿಸಲಾಯಿತು ಈ ಬಹುಮಾನವನ್ನು ಕುಮಾರಿ ಪೂಜಾ ಇವರು ನೀಡಿರುತ್ತಾರೆ ಹಾಗೂ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಅಂಗನವಾಡಿ ಶಿಕ್ಷಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.









