






ಸೂರ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ರಿ ನಾರಾವಿ ಇದರ ವಾರ್ಷಿಕ ಮಹಾಸಭೆ ಒಕ್ಕೂಟದ ಅಧ್ಯಕ್ಷ ಸುಪ್ರೀಯಾ ಇವರ ಉಪಸ್ಥಿತಿಯಲ್ಲಿ ನಾರಾವಿ ಕಾಶಿ ಮಠ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಒಕ್ಕೂಟದ ಸಿಬ್ಬಂದಿಗಳು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ., LCRP ಪುಷ್ಪಾ ಎಲ್ಲರನ್ನು ಸ್ವಾಗತಿಸಿದರು.ಕಾರ್ಯಕ್ರಮವನ್ನು ಒಕ್ಕೂಟದ ಅಧ್ಯಕ್ಷರು, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು ಹಾಗೂ ವಲಯ ಮೇಲ್ವಿಚಾರಕರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ವೇದಿಕೆಯಲ್ಲಿ ಉಪಸ್ಥಿತಿಯನ್ನು ಪಡೆದಿರುವ ತಾಲೂಕು ವಲಯ ಮೇಲ್ವಿಚಾರಕರಾದ ಸ್ವಸ್ತಿಕ್ ಜೈನ್ ಸಂಜೀವಿನಿ ಯೋಜನೆಗಳ ಬಗ್ಗೆ ಪ್ರಸ್ತಾವಿಕ ಮಾಹಿತಿ ನೀಡಿದರು. ಹಾಗೂ ಪದಗ್ರಹಣ ನಡೆಸಿದರು.


ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಭೆಯನ್ನುದ್ದೇಶಿಸಿ ಮಾತನಾಡಿದರು.CHO ಕಾವ್ಯ ಆರೋಗ್ಯ ಪೌಷ್ಟಿಕಾಂಶ, ಹದಿಹರೆಯದ ಮಕ್ಕಳ ಸಮಸ್ಯೆಗಳ ಬಗ್ಗೆ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಆರ್ಥಿಕ ಸಾಕ್ಷರತೆಯ ಬಗ್ಗೆ ಉಷಾ ಕಾಮತ್ ಇವರು ಮಾಹಿತಿ ನೀಡಿದರು.
ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಅನುಷಾ ಒಕ್ಕೂಟದ ಒಂದು ವರ್ಷದ ವರದಿ ಮಂಡಿಸಿದರು, ಪಶು ಸಖಿ ಪವಿತ್ರಾ ಇವರು ಜಮಾ ಖರ್ಚು ವಿವರವನ್ನು ಸಭೆಗೆ ಮಂಡಿಸಿದ್ದು.ಅನುಮೋದನೆಯನ್ನು ಪಡೆಯಲಾಯಿತು. ಪದಗ್ರಹಣ ನಡೆಸಿ, ಹಳೆಯ ಪದಾಧಿಕಾರಿಗಳನ್ನು ಗೌರವಿಸಿ ನೂತನ ಸದಸ್ಯರನ್ನು ಹೂ ನೀಡಿ ಬರಮಾಡಿಕೊಳ್ಳಲಾಯಿತು.
ಉತ್ತಮ ದಾಖಲಾತಿ ಹೊಂದಿರುವ ಸಂಘವನ್ನು ಗುರುತಿಸಿ ಬಹುಮಾನ ನೀಡಲಾಯಿತು. ಪುಷ್ಪ ಗುಚ್ಛ ಸ್ಪರ್ಧೆ ಯನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಂದಿರುವ ಸದಸ್ಯರಿಗೆ ಕೃಷಿ ಸಖಿ ಅಕ್ಷತಾ ಹೆಗ್ಡೆ ತರಕಾರಿ ಬೀಜವನ್ನು ನೀಡಿದರು. LCRP ಸುಭೀಕ್ಷಾ ಕಾರ್ಯಕ್ರಮ ನಿರೂಪಿಸಿ BC ಸಖಿ ಹರಿಣಾಕ್ಷಿ ಧನ್ಯವಾದ ನೀಡಿದರು.









