






ಬೆಳ್ತಂಗಡಿ : ಶ್ರೀ ಧ.ಮo.ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಕಾರ್ಕಳ,ಮಂಜುನಾಥೇಶ್ವರ ಭಜನಾ ಪರಿಷತ್ ಕಾರ್ಕಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಕಳದಲ್ಲಿ 46ನೇ ಬೃಹತ್ ಉಚಿತಾ ದಸರಾ ಯೋಗಾಸನ ಪ್ರಾಣಾಯಾಮ ಧ್ಯಾನ ಶಿಬಿರ ಹಾಗೂ ವಿದ್ಯಾರ್ಥಿಗಳಿಗೆ ಪಂಚಮುಖಿ ವ್ಯಕ್ತಿತ್ವ ವಿಕಸನ ಶಿಬಿರ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕಾರ್ಕಳ ತಾಲೂಕಿನಾದ್ಯoತ ನಗರ ಮತ್ತು ಹಳ್ಳಿಗಳಲ್ಲಿ ಏಕ ಕಾಲದಲ್ಲಿ 50 ಕೇಂದ್ರಗಳಲ್ಲಿ ಅ. 11 ರಿಂದ 17 ರವರೆಗೆ ದಸರಾ ಯೋಗಾಸನ ಪ್ರಾಣಾಯಾಮ ಶಿಬಿರ ನಡೆಯಲಿದೆ.


ಶಿಬಿರದಲ್ಲಿ 3000 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಇಂದು ನಡೆದ ಸಮಾಲೋಚನೆ ಸಭೆಯಲ್ಲಿ ಯೋಜನಾಧಿಕಾರಿ ಬಾಲಕೃಷ್ಣ, ರಾಜ್ಯ ಯೋಗ ಸಂಘಟಕ ಶೇಖರ್ ಕಡ್ತಿಲ,ಸ್ಥಳೀಯ ಮುಖಂಡರು ಭಾಗವಹಿದ್ದರು ಎಂದು ಶ್ರೀ ಧರ್ಮಸ್ಥಳ ಯೋಗ ಮತ್ತು ನೈತಿಕ ಯೋಜನಾ ನಿರ್ದೇಶಕ ಡಾ. ಐ ಶಶಿಕಾಂತ್ ಜೈನ್ ತಿಳಿಸಿದ್ದಾರೆ.









