






ಕಲ್ಮಂಜ: ಕಲ್ಮಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸೆಪ್ಟೆಂಬರ್ 25ರಂದು ಸ್ಕಂದ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ) ಕಲ್ಮಂಜ ಇದರ ವಾರ್ಷಿಕ ಮಹಾಸಭೆಯು ಒಕ್ಕೂಟದ ಅಧ್ಯಕ್ಷರಾದ ಉಷಾ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಜೀವಿನಿ ಧ್ಯೇಯಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. LCRP ಶುಭವತಿ ಸ್ವಾಗತಿಸಿದರು.
ಸ್ಕಂದ ಸಂಜೀವಿನಿ ಅಧ್ಯಕ್ಷರು ಹಾಗೂ ವಲಯ ಮೇಲ್ವಿಚಾರಕರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಹಾಗೂ ಸಂಜೀವಿನಿ ಒಕ್ಕೂಟಕ್ಕೆ NRLM ಶೆಡ್ ನಿರ್ಮಾಣದ ಕುರಿತು ಭರವಸೆ ನೀಡಿದರು. CHO ರಂಜಿತ ಮಹಿಳೆಯರಿಗೆ ಆರೋಗ್ಯದ ಬಗ್ಗೆ, ಗರ್ಭಕೋಶ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. MBK ಪೂಜಾ ಇವರು ಒಕ್ಕೂಟದ ವಾರ್ಷಿಕ ವರದಿ ಹಾಗೂ ಜಮಾ ಖರ್ಚಿನ ವರದಿಯನ್ನು ಮಂಡಿಸಿ ಸರ್ವ ಸದಸ್ಯರಿಂದ ಅನುಮೋದನೆ ಪಡೆಯಲಾಯಿತು.


ಬ್ಲಾಕ್ ಮ್ಯಾನೇಜರ್ ನಿತೇಶ್ ಸರ್ ಪ್ರಾಸ್ತಾವಿಕ ಮಾತನಾಡಿ ಸದಸ್ಯರಿಗೆ ಸಮುದಾಯ ಬಂಡವಾಳ ನಿಧಿ ಬಳಕೆ ಹಾಗೂ ತರಬೇತಿ ಆಯೋಜಿಸುವ ಬಗ್ಗೆ. food licence ಮಾಡಿಸುವ ಬಗ್ಗೆ ತಿಳಿಸಿದರು. ಸ್ವ ಉದ್ಯೋಗ ಮಾಡುವ ಬಗ್ಗೆ ತಿಳಿಸಿದರು.ಸಂಜೀವಿನಿ ಯೋಜನೆಯ ಉದ್ದೇಶದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಮುಂದೆ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ವಲಯ ಮೇಲ್ವಿಚಾರಕರಾದ ಜಯಾನಂದ ಸರ್ ಇವರು ನಡೆಸಿಕೊಟ್ಟರು. ಸಂಘದ ಸದಸ್ಯರಿಗೆ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಟ್ಟರು.
ಪುಷ್ಪಗುಚ್ಚ ಸ್ಪರ್ಧೆಯನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂಘದ ಸದಸ್ಯರು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲಾಯಿತು. ನಿರ್ಗಮಿತ ಪದಾಧಿಕಾರಿಗಳನ್ನು ಕಿರು ಕಾಣಿಕೆ ನೀಡಿ ಗೌರವಿಸಲಾಯಿತು. ಒಕ್ಕೂಟದ ಸಿಬ್ಬಂದಿಗಳಿಗೆ ಪದಾಧಿಕಾರಿಗಳು ಸೇರಿ ಸನ್ಮಾನಿಸಿದರು. ನಿತೇಶ್ ಇವರಿಗೆ ಒಕ್ಕೂಟ MBK ಪೂಜಾ ರವರು ಒಕ್ಕೂಟದ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಕೃಷಿ ಸಖಿ ಪುಷ್ಪ ಇವರು ಧನ್ಯವಾದ ನೀಡಿದರು.ಸೌಮ್ಯ ಹಾಗೂ ಅಕ್ಷತಾ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಒಕ್ಕೂಟದ ಸಿಬ್ಬಂದಿಗಳಾದ ಪಶು ಸಖಿ ಪುಷ್ಪಲತಾ, ಒಕ್ಕೂಟದ ಪದಾಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳು, ಕಾರ್ಯಕ್ರಮಕ್ಕೆ ಸಹಕರಿಸಿದರು. ಎಲ್ಲಾ ಸಂಘದಿಂದ ಸದಸ್ಯರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.









