ರೋಟರಿ ಕ್ಲಬ್ ವತಿಯಿಂದ ರಾಷ್ಟೀಯ ಆಯುರ್ವೇದ ದಿನಾಚರಣೆ

0

ಬೆಳ್ತಂಗಡಿ : ರಾಷ್ಟ್ರೀಯ ಆಯುರ್ವೇದ ದಿನವನ್ನು ಸೆ. 23 ರಂದು ರೋಟರಿ ಕ್ಲಬ್ ನಲ್ಲಿ ಆಚರಿಸಲಾಯಿತು. ಧನ್ವಂತರೀ ದೇವರ ಮೂರ್ತಿಯನ್ನು ಇಟ್ಟು ಅದಕ್ಕೆ ಹೂಮಾಲೆಯನ್ನು ಹಾಕುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು.

ತದನಂತರ ಅಧ್ಯಕ್ಷ ಶ್ರೀಧರ ಕೆ.ವಿ. ಕಳೆದ ವಾರ ನಡೆದ ಕಾರ್ಯಕ್ರಮಗಳ ವಿವರವನ್ನು ತಿಳಿಸಿದರು .ಕ್ಲಬ್ ನಲ್ಲಿ ಇರುವ ಆಯುರ್ವೇದ ವೈದ್ಯರುಗಳಾದ ಡಾ.ಗೋಪಾಲಕೃಷ್ಣ, ಡಾ.ಶ್ರೀ ಹರಿ, ಡಾ. ಪ್ರದೀಪ ನಾವೂರ ಅವರುಗಳು ಆಯುರ್ವೇದ ದ ಮಹತ್ವವನ್ನು ತಿಳಿಸಿದರು .

ಕಾರ್ಯಕ್ರಮದ ಕೊನೆಯಲ್ಲಿ ಕ್ಲಬ್ ನಲ್ಲಿ‌ಇರುವಂತಹ ಆಯುವೇದಿಕ್ ವೈದ್ಯರುಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ‌ ಕಾರ್ಯದರ್ಶಿ ರೊ.ಡಾ.ರಾಘವೇಂದ್ರ ಪಿದಮಲೆ ವಂದಿಸಿದರು.

LEAVE A REPLY

Please enter your comment!
Please enter your name here