ಸೆ.26- ಅ.7ವರೆಗೆ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ 12 ದಿನಗಳ ಕಾಲ ರುದ್ರಾಭಿಷೇಕ

0

ನಿಡಿಗಲ್ : ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನ, ನಿಡಿಗಲ್ ಇಲ್ಲಿ ಇತ್ತೀಚೆಗೆ ನೆರವೇರಿದ ಅಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದ ದೋಷಗಳ ಪರಿಹಾರಾರ್ಥವಾಗಿ ತಂತ್ರಿಗಳ ನಿರ್ದೇಶನದಂತೆ ವಿವಿಧ ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅದರ ಅಂಗವಾಗಿ, ಸೆ.26 ಶನಿವಾರದಿಂದ ಅ.07ರವರೆಗೆಪ್ರತಿದಿನ ಬೆಳಿಗ್ಗೆ 8:00 ಗಂಟೆಯಿಂದ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನ, ನಿಡಿಗಲ್ ನಲ್ಲಿ ದೇವಸ್ಥಾನದ ದೋಷಗಳ ಪರಿಹಾರಾರ್ಥವಾಗಿ 12 ದಿನಗಳ ಕಾಲ ರುದ್ರಾಭಿಷೇಕ ಧಾರ್ಮಿಕ ಕಾರ್ಯಕ್ರಮವು ನೆರವೇರಲಿದೆ.

ಈ ಪುಣ್ಯ ಕಾರ್ಯದಲ್ಲಿ ಸಮಸ್ತ ಭಗವದ್ಭಕ್ತರು ಊರಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಲೋಕನಾಥೇಶ್ವರ ಸ್ವಾಮಿಯ ದಿವ್ಯಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಭಕ್ತಿಪೂರ್ವಕವಾಗಿ ವಿನಂತಿಸಿಕೊಂಡಿದ್ದಾರೆ.

ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ, ದೇವರ ಕೃಪೆಗೆ ಪಾತ್ರರಾಗಬೇಕಾಗಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುರಾಜ್ ಗುರಿಪಳ್ಳ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here