






ಸಂತ ತೆರೇಸಾ ಪ್ರೌಢಶಾಲೆಯ ಬಾಲಕರ ಅಮೋಘ ಸಾಧನೆ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ, ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ ಸೆ.22 ರಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಬಡಗಕಾರಂದೂರು, ಬೆಳ್ತಂಗಡಿ. ಇಲ್ಲಿ ನಡೆದ ಜಿಲ್ಲಾ ಮಟ್ಟದ 14 ರ ವಯೊಮಾನದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.


ಹಾಗೂ ಯಶ್ವಿತ್ ಬೆಸ್ಟ್ ಆಲ್ ರೌಂಡರ್ ಚಾಂಪಿಯನ್ ಆಗಿರುತ್ತಾನೆ. ಕ್ರೀಡಾಪಟುಗಳಿಗೆ ಶಾಲಾ ಆಡಳಿತ ಮಂಡಳಿ, ರಕ್ಷಕ ಶಿಕ್ಷಕ ಸಂಘ, ಹಿರಿಯ ವಿದ್ಯಾರ್ಥಿ ಸಂಘ, ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕ ವೃಂದದವರ ಪರವಾಗಿ ಅಭಿನಂದನೆಗಳು ಹಾಗೂ ಮುಂದಿನ ವಿಭಾಗ ಮಟ್ಟದ ಪಂದ್ಯಾಟಕ್ಕೂ ಶುಭವನ್ನು ಕೋರುತ್ತೇವೆ. ಅವರನ್ನು ತರಬೇತುಗೊಳಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ವಿನ್ಸೆಂಟ್ ಸಿಕ್ವೇರಾ ಇವರಿಗೂ ಕೂಡ ಅಭಿನಂದನೆಗಳು.









