ಪಾಂಡವರಕಲ್ಲುವಿನಲ್ಲಿ ಮದ್ದಡ್ಕ ಗೊಮಿತ್ರ ಮಿಲ್ಕ್ ಪ್ರಾಡಕ್ಟ್ 2ನೇ ಶಾಖೆ ಪ್ರಾರಂಭ

0

ಮದ್ದಡ್ಕ : ಗೊಮಿತ್ರ ಮಿಲ್ಕ್ ಪ್ರಾಡಕ್ಟ್ ಮದ್ದಡ್ಕ ಸಂಸ್ಥೆ ಪ್ರಾರಂಭವಾಗಿ 3ವರ್ಷ ಪೂರೈಸತ್ತಿರುವ ಈ ಸಂದರ್ಭದಲ್ಲಿ ಹೈನುಗಾರ ರೈತರನ್ನು ಪ್ರೋತ್ಸಾಹಿಸುವ ಉತ್ತೇಜಿಸುವ ಉದ್ದೇಶದಿಂದ ಹಾಗೂ ಸ್ಥಳೀಯ ರೈತರ ಬೇಡಿಕೆ ಮೇರೆಗೆ ಜಿಲ್ಲೆಯಲ್ಲೇ ಪ್ರಥಮ ಖಾಸಗಿ ಹಾಲು ಖರೀದಿ ಕೇಂದ್ರ ಹಾಲಿನ ಖರೀದಿ ಕೇಂದ್ರವನ್ನು ಬಂಟ್ವಳ ತಾಲೂಕಿನ ಪಾಂಡವರಕಲ್ಲು ನಲ್ಲಿ ಸೆ. 20ರಂದು ಉದ್ಘಾಟನೆ ಗೊಂಡಿತು.

ಡೈರಿ ಉದ್ಘಾಟನೆಯನ್ನು ಸಂಸ್ಥೆ ಮಾಲಕ ರೋನಾಲ್ಡ್ ಸಿಕ್ವೆರಾರ ಮಾತೃಶ್ರೀ ನೆನೆಡಿಕ್ಟಾ ಸೇಕ್ವೆರಾ ಉದ್ಘಾಟಿಸಿದರು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಸಹಾಯಕ ಧರ್ಮಗುರು ಲ್ಯಾರಿ ಪಿಂಟೋ ಆಶೀರ್ವದಿಸಿದರು.

ಸ್ಥಳೀಯ ಮಸೀದಿ ಅಧ್ಯಕ್ಷ ಅದಂ, ವಾಳೆಯ ಗುರಿಕಾರ ಪ್ರಕಾಶ್ ಮಾಡ್ತಾ,ಜಯ ಬಂಗೇರ, ಸ್ಥಳೀಯ ಉದ್ಯಮಿ ಹಾಗೂ ಹೈನುಗಾರ ಸುಹೈಲ್,ಪ್ರಮೋದ್ ಕುಮಾರ್, ಕಟ್ಟಡ ಮಾಲಕ ವಿಲಿಯಂ ಡಿಕುನ್ಹ, ಮಾಲಕರ ಧರ್ಮಪತ್ನಿ ಲೀನಾ ಸಿಕ್ವೆರಾ, ಮಕ್ಕಳಾದ ರೋಲೆನ್ ಸಿಕ್ವೆರಾ, ರೋಲ್ಡನ್ ಸಿಕ್ವೆರಾ, ಊರ ರೈತಾಪಿ ವರ್ಗ, ಹೈನುಗಾರರರು ಉಪಸ್ಥಿತರಿದ್ದರು.ಮಾಲಕ ರೋನಾಲ್ಡ್ ಸಿಕ್ವೆರಾ ಸ್ವಾಗತಿಸಿ ಸರ್ವರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here