






ಕಕ್ಯಪದವು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ, ರಾಯಿ ಕ್ಲಸ್ಟರ್ ನೇತೃತ್ವದೊಂದಿಗೆ ವಾಮದಪದವು ವಲಯದ ಕ್ರೀಡಾ ಕೂಟವು ಸೆಪ್ಟೆಂಬರ್ 22 ರಂದು ಎಸ್.ವಿ. ಎಸ್ ದೇವಳ ಆಂಗ್ಲಮಾಧ್ಯಮ ಶಾಲಾ ಕ್ರೀಡಾಂಗಣ ಬಂಟ್ವಾಳದಲ್ಲಿ ನಡೆಯಿತು. ಈ ಕ್ರೀಡಾ ಕೂಟದಲ್ಲಿ ಎಲ್.ಸಿ .ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪ್ರಾಥಮಿಕ ವಿಭಾಗದ ಒಟ್ಟು 13 ವಿದ್ಯಾರ್ಥಿಗಳು ಭಾಗವಹಿಸಿದರು.


ಬಾಲಕ ಬಾಲಕಿಯರ 14ರ ವಯೋಮಾನದ ಡಿಸ್ಕ್ ಎಸೆತದ ಸ್ಪರ್ಧೆಯಲ್ಲಿ ಫಾತಿಮಾತ್ ಉಮೇಝ 6ನೇ ತರಗತಿ ತ್ರತೀಯ ಸ್ಥಾನ, ಗುಂಡು ಎಸೆತದ ಸ್ಪರ್ಧೆಯಲ್ಲಿ ರಿಶಿಕ 7ನೇ ತರಗತಿ ತ್ರತೀಯ ಸ್ಥಾನವನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹಾಗೂ ಪ್ರಶಸ್ತಿಗೆ ಭಾಜನರಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು,ಸಂಯೋಜಕರು, ಮುಖ್ಯ ಶಿಕ್ಷಕಿ ಹಾಗೂ ಬೋಧಕ ಮತ್ತು ಬೋಧಕೇತರ ವೃಂದವರು ಅಭಿನಂದಿಸಿದರು.
ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಹರಿಣಾಕ್ಷಿ ಜಿ.ಕೆ ಮತ್ತು ಪ್ರಥ್ವಿರಾಜ್ ಇವರು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿರುತ್ತಾರೆ.









