






ಮಡಂತ್ಯಾರು: ಎಸ್.ಪಿ.ವೈ.ಎಸ್.ಎಸ್ ಯೋಗ ಸಮಿತಿ ವತಿಯಿಂದ ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಭಾಭವನ ಶಾಖೆ,ಮಡಂತ್ಯಾರು, ಬೆಳ್ತಂಗಡಿ ಇಲ್ಲಿ ಕಳೆದ 56 ದಿನಗಳಿಂದ ನಡೆಯುತ್ತಿರುವ ಯೋಗ ತರಗತಿಯಲ್ಲಿ ಭಾನುವಾರ ಮಾತೃ ವಂದನಾ,ಮಾತೃಭೋಜನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷೆ ಸ್ಮಿತಾ ಮುಖ್ಯ ಮಾತುಗಾರರಾಗಿ ಅಶೋಕ್ ಅಣ್ಣಹಾಗೂ ಅತಿಥಿಗಳಾಗಿ ಧನಲಕ್ಷ್ಮಿ ಅಕ್ಕ ಭಾಗವಹಿಸಿದರು.ಮುಖ್ಯ ಮಾತುಗಾರರಾದ ಅಶೋಕ್ ಅಣ್ಣನವರು ನಮ್ಮ ಜೀವನದಲ್ಲಿ ಅಮ್ಮನ ಪಾತ್ರದ ಬಗ್ಗೆ ನೆನಪಿಸಿ,ಹೆತ್ತವರನ್ನು ಹಿರಿಯರನ್ನು ನಾವು ಯಾವಾಗಲೂ ಗೌರವದಿಂದ ನಡೆಸಿಕೊಳ್ಳಬೇಕೆಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರು, ಯೋಗ ತರಬೇತಿ ಪಡೆದವರು ಸಾರ್ವಜನಿಕರ ಸಮೇತ 130 ಮಂದಿ ಭಾಗವಹಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಯೋಗಪಟುಗಳೆ ತಯಾರಿಸಿ ತಂದಿರುವ ಆಹಾರವನ್ನು ಕೈ ತುತ್ತಿನ ಮೂಲಕ ವಿತರಿಸುವ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.
ತುಳಸಿ ಅಕ್ಕ ನಿರೂಪಣೆ ಮಾಡಿದರು. ಅನುಪಮ ಸ್ವಾಗತ ಮಾಡಿದರು. ಪ್ರವಿತ ವರದಿ ವಾಚನ ಮಾಡಿದರು. ಆಶಾ ವಂದನಾರ್ಪಣೆ ಮಾಡಿದರು.









