






ಬೆಳಾಲು ಸಿಂಧೂರ ಸ್ಪೋರ್ಟ್ಸ್ ಕ್ಲಬ್ ಇದರ ವತಿಯಿಂದ ಎರಡನೇ ವರ್ಷದ ಗುಡ್ಡಗಾಡು ಓಟ ಸೆ. 20ರಂದು ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಆರಿಕೋಡಿ ಶ್ರೀ ಚಾಮುಂಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ನೆರವೇರಿಸಿದರು.
ಸಭಾಧ್ಯಕ್ಷತೆಯನ್ನು ಸಿಂಧೂರ ಸ್ಕೋರ್ಟ್ ಕ್ಲಬ್ಬಿನ ಅಧ್ಯಕ್ಷೆ ನಿಶಾ ಯಶವಂತ ಬನಂದೂರು ವಹಿಸಿದ್ದರು. ರಾಜ್ಯಮಟ್ಟದ ಉತ್ತಮ ಶಿಕ್ಷಕ ರತ್ನ ಪ್ರಶಸ್ತಿ ಪಡೆದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ, ಬೆಳಾಲಿನ ದೈಹಿಕ ಶಿಕ್ಷಕ ಕೃಷ್ಣಾನಂದರಾವ್ ಇವರನ್ನು ಗೌರವಿಸಲಾಯಿತು, ಹಾಗೂ ಬೆಳಾಲು ಗ್ರಾಮದ ರಾಜ್ಯಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಪಟು ಸುಮನ್ ಪಿ. ಗೌಡ ಇವರನ್ನು ಸನ್ಮಾನಿಸಲಾಯಿತು.


ಈ ಸ್ಪರ್ಧೆಯು ಸುಮಾರು 6 ವಿಭಾಗಗಳಲ್ಲಿ ನಡೆದಿದ್ದು ಒಟ್ಟು 165 ಸ್ಪರ್ಧಿಗಳು ಭಾಗವಹಿಸಿದ್ದರು, ವಿಜೇತರಿಗೆ ಪದಕ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನವನ್ನು ಬೆಳಾಲು ವಿನಂದೇಲು ಸ್ಟೋರ್ ನ ಮಾಲಕ ಜಯಣ್ಣ ಗೌಡ ಮೀನಂದೇಲು, ಉಜಿರೆ ವುಡ್ ಹೌಸ್ ಮಾಲಕ ಅನಿಜಿತ್ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಊರಿನ ಗಣ್ಯರಾದ ಬೆಳ್ತಂಗಡಿಯ ವಕೀಲರು ಶ್ರೀನಿವಾಸ್ ಗೌಡ ಬೆಳಾಲು, ಬೆಳಾಲು ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ವೆಂಕಟೇಶ್ ಭಟ್ ಬೆಳಾಲು, ವಸಂತ ಆಚಾರ್ಯ ಆಲಡ್ಕ, ಪೆರಣ ಗೌಡ ಪರಾರಿ, ಮಾಧವ ಗೌಡ ಓಣಜೆ, ಸುಂದರ ಎಂ ಕೆ ಬೆಳಾಲು, ಹಾಗೂ ಪದಾಧಿಕಾರಿಗಳಾದ, ಸುಲೇಮಾನ್ ಬಿಮಂಡೇ, ಶಿಲ್ಪಿ ಶಶಿಧರ ಆಚಾರ್ಯ ಶಶಿಧರ ಆಚಾರ್ಯ ಶಾಂತಿನಗರ, ಗಣೇಶ್ ಓಡಿಪ್ರೊಟ್ಟು, ಗೌಡ, ಕರಿಯಣ್ಣ ಗೌಡ ಬೇರಿಕೆ, ಲತಾ ಕೇಶವ ಗೌಡ, ಸತೀಶ್ ಎಳ್ಳುಗದ್ದೆ, ಡಾ. ಶೀಲಾವತಿ ಧರ್ಮೇಂದ್ರ ಕುಮಾರ್, ಜಯಶ್ರೀ ಬೆಳಾಲು, ಯಶವಂತ ಗೌಡ ಬನಂದೂರು, ಸುಲೋಚನ ಮೂರ್ಲೆಗುಂಡಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಸಂಯೋಜನೆಯನ್ನು ಸಿಂಧೂರ ಕೋರ್ಸ್ ಕ್ಲಬ್ ಕಾರ್ಯದರ್ಶಿ ಧರ್ಮೇಂದ್ರ ಕುಮಾರ್ ನೆರವೇರಿಸಿದರು. ವಂದನಾರ್ಪಣೆಯನ್ನು ಸುಲೇಮಾನ್ ಭೀಮಂಡೆ ನೆರವೇರಿಸಿದರು.









