ಮಚ್ಚಿನ ಪ್ಯಾಕ್ಸ್ ಮಹಾಸಭೆ : ರೂ.1.02.ಕೋಟಿ ಲಾಭ ಶೇ. 20% ಡಿವಿಡೆಂಡ್

0

ಬೆಳ್ತಂಗಡಿ : ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2025-26 ನೇ ವರ್ಷದ ವಾರ್ಷಿಕ ಸಾಮಾನ್ಯ ಮಹಾಸಭೆ ಸಂಘದ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಸೆ. 21 ರಂದು ಸಂಘದ ಸಭಾ ಭವನದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪದ್ಮನಾಭ ಸಾಲ್ಯಾನ್  ನಮ್ಮ ಸಂಘವು ಕಳೆದ ಕೆಲವು ವರ್ಷಗಳಿಂದ ಹಂತ ಹಂತವಾಗಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಾ ಬಂದಿದೆ. ಹಿಂದಿನ ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದಾಗ ಸದಸ್ಯರ ಸಂಖ್ಯೆ, ಠೇವಣಿ, ಸಾಲ ವಿತರಣೆ, ಒಟ್ಟು ವ್ಯವಹಾರ ಹಾಗೂ ಲಾಭದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ. ಇದು ಕೇವಲ ಸಂಘದ ಅಂಕಿ-ಅಂಶಗಳ ಬೆಳವಣಿಗೆ ಮಾತ್ರವಲ್ಲ. ಸದಸ್ಯರ ವಿಶ್ವಾಸ ಮತ್ತು ಸಂಘದ ಮೇಲಿನ ನಂಬಿಕೆ ಹೆಚ್ಚಾಗಿದೆ ಎಂಬುದಕ್ಕೆ  ಸಂಘವು ವರದಿ ವರ್ಷದಲ್ಲಿ 1.90 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿ,ರೂ.1.02.13,388.45 ಲಾಭ ಗಳಿಸಿ, ಸದಸ್ಯರಿಗೆ ಶೇ. 20% ಡಿವಿಡೆಂಡ್ ನೀಡಲಾಗುವುದು ಎಂದು ತಿಳಿಸಿದರು.

ನಿರ್ದೇಶಕರಾದದ ಗಣೇಶ್ ಅರ್ಕಜೆ, ಮೋಹನ್ ಗೌಡ, ಸುಜಾತಾ ಪಿ ಸಾಲ್ಯಾನ್, ರಾಜೇಶ್ ನಾಯ್ಕ, ಬೇಬಿ, ಆನಂದ, ಚಿತ್ತರಂಜನ್ ಕೆ., ತುಂಗಪ್ಪ, ಉಮೇಶ್, ಜಯರಾಮ ಹಾಗೂ ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು.

ಗುಮಾಸ್ತೆ ಎಕಲತಾ ಪಿ. ಶೆಟ್ಟಿ ಪ್ರಾರ್ಥಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಯಕ್ಷಣ್ ವರದಿ ವಾಚಿಸಿ, ಸಂಘದ ಉಪಾಧ್ಯಕ್ಷ  ಶ್ರೀಧರ ಪೂಜಾರಿ ಕೆ., ಸ್ವಾಗತಿಸಿ,  ನಿರ್ದೇಶಕ ಮೋಹನ್ ಗೌಡ ವಂದಿಸಿ, ಮಾರಟ ವಿಭಾಗ ಗುಮಾಸ್ತೆ  ಸೌಜನ್ಯ ಎನ್. ಬಿ. ನಿರೂಪಿಸಿದರು.

LEAVE A REPLY

Please enter your comment!
Please enter your name here