ಸೆ. 22: ಉಜಿರೆಯಲ್ಲಿ ಇಂಜಿನಿಯರ್ಸ್ ಡೇ ಆಚರಣೆ

0

ಬೆಳ್ತಂಗಡಿ : ಭಾರತೀಯ ಸಲಹಾ ಸಿವಿಲ್ ಇಂಜಿನಿಯರ್ಸ್ ಸಂಘ ಬೆಳ್ತಂಗಡಿ ಘಟಕದ ವತಿಯಿಂದ ಸೆ. 22ರಂದು ಸಂಜೆ ಉಜಿರೆ ಓಷನ್ ಪರ್ಲ್ ನಲ್ಲಿ ಇಂಜಿನಿಯರ್ಸ್ ದಿನಾಚರಣೆ ನಡೆಯಲಿದೆ ಎಂದು ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ್ ಬಂಗೇರ ಎಂ. ಡಿ. ಹೇಳಿದರು. ಅವರು ಸೆ. 21 ರಂದು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ವಿವರ ನೀಡಿದರು.

ನಿಕಟಪೂರ್ವ ಅಧ್ಯಕ್ಷ ಜಗದೀಶ್ ಪ್ರಸಾದ್ ಮಾತನಾಡಿ ಇಂಜೀನಿಯರ್ ಗಳ ವಿವಿಧ ಸಮಸ್ಯೆ ಕುರಿತು ವಿವರ ನೀಡಿ ಈ ಕುರಿತು ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ನೀಡಲಾಗುವುದು.ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ವಾಹನ ಜಾಥಾ ನಡೆಯಲಿದ್ದು ಬಳಿಕ ಬೆಳ್ತಂಗಡಿ ಪಟ್ಟಣ ಪಂಚಾಯತ್ ಇಂಜಿನಿಯರ್ ಮಹಾವೀರ ಅರಿಗ ಧ್ವಜಾರೋಹಣ ನೆರವೇರಿಸಲಿದ್ದಾರೆ.ನಂತರ ಉಜಿರೆ ಎಸ್ ಡಿ ಎಂ ಐ ಟಿ ಕಾಲೇಜು ಮತ್ತು ಪಾಲಿಟೆನಿಕ್ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಮಾಹಿತಿ ಕಾರ್ಯಾಗಾರ ನಡೆಯಲಿದೆ.

ಸಂಜೆ ಓಷನ್ ಪರ್ಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟೀಯ ಅಧ್ಯಕ್ಷ ರಾಜೇಂದ್ರ ಕಲಬಾವಿ, ಅಧ್ಯಕ್ಷರು ಉಡುಪಿ ಯ ಅಧ್ಯಕ್ಷರು ರಾಷ್ಟೀಯ ನಿರ್ದೇಶಕ ಭಗವಾನ್ ದಾಸ್ ಕೆ. ಭಾಗವಹಿಸಲಿದ್ದಾರೆ ಎಂದು ಹೇಳಿದರು.ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.ಪತ್ರಿಕಾ ಗೋಷ್ಠಿಯಲ್ಲಿ ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಶಿಜೋ ಜೋಸೆಫ್, ಕೋಶಾಧಿಕಾರಿ ಇಂ. ನಾಗೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here