ಮಚ್ಚಿನದ ಗಗನ್ ಸಿ. ಶೆಟ್ಟಿಗೆ ‘ಶ್ರೀ ವೀರಭದ್ರ ಕೇಸರಿ’ ಪ್ರಶಸ್ತಿ

0

​ಬೆಳ್ತಂಗಡಿ : ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಿರಿಯಡ್ಕ ಇವರ ವತಿಯಿಂದ ನಡೆದ 50ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಹಿರಿಯಡ್ಕದಲ್ಲಿ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾಟದಲ್ಲಿ ಮಚ್ಚಿನ ಗ್ರಾಮದ ಗಗನ್ ಸಿ. ಶೆಟ್ಟಿ ಅವರು ‘ಶ್ರೀ ವೀರಭದ್ರ ಕೇಸರಿ’ ಪ್ರಶಸ್ತಿ ಹಾಗೂ ಗದೆಯನ್ನು ಮುಡಿಗೇರಿಸಿಕೊಂಡಿದ್ದಾರೆ. ​

ಮಚ್ಚಿನ ಗ್ರಾಮದ ಪೆರಂಗೋಡಿ ನಿವಾಸಿಗಳಾದ ಚಂದ್ರಶೇಖರ್ ಬಿ. ಶೆಟ್ಟಿ ಮತ್ತು ಗೀತಾ ಸಿ. ಶೆಟ್ಟಿ ದಂಪತಿಯ ಪುತ್ರರಾಗಿರುವ ಗಗನ್ ಸಿ. ಶೆಟ್ಟಿ, ಪುರುಷೋತ್ತಮ ಗುಜರನ್ ಅವರ ಶಿಷ್ಯರಾಗಿದ್ದಾರೆ.​

ಕುಸ್ತಿ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರತಿಭೆ ಮೆರೆದು ವಿಜೇತರಾಗುವ ಮೂಲಕ ಸ್ಥಳೀಯರಿಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದಿರುವ ಗಗನ್ ಅವರ ಈ ಸಾಧನೆಗೆ ಕ್ರೀಡಾಭಿಮಾನಿಗಳು ಹಾಗೂ ಊರಿನ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here