






ಕರ್ನಾಟಕ ಸರ್ಕಾರವು ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಿರುವುದು ಅತ್ಯಂತ ಸಂತೋಷ ಹಾಗೂ ಹೆಮ್ಮೆಯ ವಿಚಾರ. ಇದು ಕೇವಲ ಒಂದು ಭಾಷೆಗೆ ದೊರೆತ ಮಾನ್ಯತೆಯಲ್ಲ. ನಮ್ಮ ಹಿರಿಯರು ಉಳಿಸಿಕೊಂಡು ಬಂದ ತುಳುನಾಡಿನ ಶ್ರೀಮಂತ ಇತಿಹಾಸ, ಸಂಸ್ಕೃತಿ, ಪರಂಪರೆ, ಸಾಹಿತ್ಯ, ದೈವಾರಾಧನೆ, ಯಕ್ಷಗಾನ ಹಾಗೂ ಜನಜೀವನಕ್ಕೆ ದೊರೆತ ಗೌರವವಾಗಿದೆ.ತುಳು ಭಾಷೆ ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆಯನ್ನು ತನ್ನೊಳಗೆ ಉಳಿಸಿಕೊಂಡಿರುವ ಜೀವಂತ ಭಾಷೆಯಾಗಿದೆ.


ಸರ್ಕಾರದ ಈ ನಿರ್ಧಾರದಿಂದ ತುಳು ಭಾಷೆಯ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ದೊರೆಯಲಿದ್ದು, ಮುಂದಿನ ಪೀಳಿಗೆಗೆ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯವೂ ಬಲಗೊಳ್ಳಲಿದೆ.ಕರ್ನಾಟಕ ಸರ್ಕಾರದ ಈ ಐತಿಹಾಸಿಕ ನಿರ್ಧಾರವನ್ನು ತುಳುನಾಡಿನಲ್ಲಿ ದೈವ ಚಾಕಿರಿ ಮಾಡುವವರ ಪರವಾಗಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ತುಳು ಭಾಷೆಯ ಬೆಳವಣಿಗೆ ಹಾಗೂ ಸಂರಕ್ಷಣೆಗಾಗಿ ಸರ್ಕಾರ, ಸಂಘ-ಸಂಸ್ಥೆಗಳು, ಸಾಹಿತಿಗಳು ಮತ್ತು ಪ್ರತಿಯೊಬ್ಬ ತುಳುವರೂ ಒಗ್ಗಟ್ಟಿನಿಂದ ಕೈಜೋಡಿಸಬೇಕಾಗಿದೆ ಎಂದು ರವೀಶ್ ಪಡುಮಲೆ ತಿಳಿಸಿದ್ದಾರೆ.









