2026-27ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಬೆಳೆ ದರ್ಶಕದಲ್ಲಿ ಬೆಳೆ ವಿವರ ಪರಿಶೀಲನೆಗೆ ಅವಕಾಶ

0

ಬೆಳ್ತಂಗಡಿ: 2026-27ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆಯನ್ನು ಕೈಗೊಳ್ಳಲು ಗ್ರಾಮವಾರು ಹಂಚಿಕೆ ಮಾಡಲಾದ ಖಾಸಗಿ ನಿವಾಸಿಗಳ ವಿವರವನ್ನು (ಹೆಸರು, ಮೊಬೈಲ್ ಸಂಖ್ಯೆ, ಸರ್ವೆ ನಂಬರ್) ಬೆಳೆ ದರ್ಶಕ ಮೊಬೈಲ್ ತಂತ್ರಾಂಶದ ಮೂಲಕ ವೀಕ್ಷಿಸಬಹುದು.

ಈ ಕೆಳಗಿನ ಲಿಂಕ್ ಮೂಲಕ ಬೆಳೆ ದರ್ಶಕ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಿ :https://play.google.com/store/apps/details?id=com.crop.offcskharif_2021ಬೆಳೆ ದರ್ಶಕ ತಂತ್ರಾಂಶದಲ್ಲಿ 2020-21ನೇ ಸಾಲಿನಿಂದ 2026-27ನೇ ಸಾಲಿನವರೆಗೆ ನಿಮ್ಮ ಎಲ್ಲಾ ಸರ್ವೆ ನಂಬರ್‌ಗಳಲ್ಲಿ ದಾಖಲಾಗಿರುವ ಬೆಳೆ ವಿವರವನ್ನು ಫೋಟೋ ಸಹಿತ ವೀಕ್ಷಿಸಬಹುದು.

ಹಾಗೂ ಚಾಲ್ತಿ ಸಾಲಿನ ಬೆಳೆ ಸಮೀಕ್ಷೆಯಲ್ಲಿ ತಪ್ಪುಗಳಿದ್ದರೆ, ಆಕ್ಷೇಪಣೆ ಸಲ್ಲಿಸಬಹುದು ಅಥವಾ ಲಿಖಿತವಾಗಿಯೂ ತಹಶೀಲ್ದಾರ್ ಅವರ ಕಚೇರಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಬೆಳ್ತಂಗಡಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here