






ಬೆಳ್ತಂಗಡಿ : ಮಿಸೇರಿಯೋರ್ ಪ್ರಾಯೋಜಕತ್ವದಲ್ಲಿ ಕ್ರಾಸ್ ಸಂಸ್ಥೆ ಬೆಂಗಳೂರು ಹಾಗೂ ಡಿ.ಕೆ.ಆರ್.ಡಿ.ಎಸ್ (ರಿ)ಬೆಳ್ತಂಗಡಿ ಇದರ ನೇತೃತ್ವದಲ್ಲಿ ಲಿಂಗ ಸಮಾನತಾ ಪ್ರೇರಕ ತಂಡದ ಸದಸ್ಯರಿಗೆ ಸಾಮರ್ಥ್ಯ ವರ್ಧನಾ ತರಬೇತಿಯನ್ನು ಸೆ.17ರಂದು ಸಾನ್ತೋಮ್ ಟವರ್ ಬೆಳ್ತಂಗಡಿ ಇಲ್ಲಿ ಆಯೋಜಿಸಲಾಗಿತ್ತು.
ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಮಂಜುಳಾ ಜೋನ್ ಅಧ್ಯಕ್ಷರು, ಮಾನಿನಿ ರಾಜ್ಯ ಮಹಿಳಾ ಒಕ್ಕೂಟ ಇವರು ವಹಿಸಿದ್ದರು. ಉದ್ಘಾಟನೆಯನ್ನು ನೆರವೇರಿಸಿದ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ಫಾ. ಆದರ್ಶ್ ಪಿ.ಎಸ್ ಇವರು ಶುಭ ಹಾರೈಸಿದರು.
ಕ್ರಾಸ್ ಸಂಸ್ಥೆ ಬೆಂಗಳೂರು ಇಲ್ಲಿನ ಮಹಿಳಾ ಸಬಲೀಕರಣ ಯೋಜನೆಯ ರಾಜ್ಯ ಸಂಯೋಜಕ ರಾಜಶೇಖ ತರಬೇತಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟ ಬೆಳ್ತಂಗಡಿ ಇದರ ಉಪಾಧ್ಯಕ್ಷ ಫಿಲೋಮಿನಾ ತೋಮಸ್, ಮಹಿಳಾ ಸಬಲೀಕರಣ ಯೋಜನೆಯ ಸಂಯೋಜಕಿ ಸಿಸಿಲ್ಯಾ ತಾವ್ರೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಸಿ.ಒ.ಡಿ.ಪಿ ಸಂಸ್ಥೆ ಮಂಗಳೂರು ಇಲ್ಲಿನ ಯೋಜನಾ ಸಂಯೋಜಕ ಸುಪ್ರಿಯಾ ಲಿಂಗ ಮತ್ತು ಲಿಂಗತ್ವ ವ್ಯತ್ಯಾಸಗಳು, ಅಸಮಾನತೆ ಎಂದರೇನು, ವಿವಿಧ ಕಾನೂನು ವ್ಯವಸ್ಥೆಗಳು ಲಿಂಗ ಸಮಾನತಾ ತಂಡದ ಸದಸ್ಯರಾಗಿ ಮಾಡಬೇಕಾಧ ಕೆಲಸ ಕಾರ್ಯಗಳ ಬಗ್ಗೆ ತರಬೇತಿ ನೀಡಿದರು.
ಕಿರಣ್ ಒಕ್ಕೂಟದ ಕೋಶಾಧಿಕಾರಿ ಮತ್ತು ತಂಡಧ ಸದಸ್ಯ ಚಂದನಾರವರು ಎಲ್ಲರನ್ನು ಸ್ವಾಗತಿಸಿದರು. ಸ್ನೇಹ ಜ್ಯೋತಿ ಒಕ್ಕೂಟದ ಅಧ್ಯಕ್ಷೆ ಫಿಲೋಮಿನಾ ತೋಮಸ್ ವಂದಿಸಿದರು. ಸಿಸಿಲ್ಯಾ ತಾವ್ರೊ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 31 ಮಂದಿ ಭಾಗವಹಿಸಿದ್ದರು.









