ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಶೇ. 65 ಬೋನಸ್, ಶೇ. 10 ಡಿವಿಡೆಂಟ್ ಘೋಷಣೆ

0

ಧರ್ಮಸ್ಥಳ : ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘದ 2025-2026ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸೆ. 16ರಂದು ಸಂಘದ ಅಧ್ಯಕ್ಷ ಟಿ. ವಿ. ದೇವಸ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ವಿ. ಮರಿಯಮ್ಮ ವರದಿಯನ್ನು ಮಂಡಿಸಿದರು. 2025-2026ನೇ ಸಾಲಿನಲ್ಲಿ ನಿವ್ವಳ ಲಾಭ ರೂ. 2,25,798-55 ಗಳಿಸಿದ್ದು ಲಾಭಾಂಶದಿಂದ ಹಾಲು ಉತ್ಪಾದಕರಿಗೆ 65% ಬೋನಸ್ ಮತ್ತು ಸದಸ್ಯರಿಗೆ ಶೇ. 10ಡಿವಿಡೆಂಟ್ ಘೋಷಿಸಲಾಯಿತು.

ಸಂಘದ ಸದಸ್ಯ ಲೋಕೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಅಧ್ಯಕ್ಷ ಟಿ. ವಿ. ದೇವಸ್ಯ ಸ್ವಾಗತಿಸಿ ಉಪಾಧ್ಯಕ್ಷ ಸುನಿಲ್ ವಂದಿಸಿದರು.ಸಂಘದ ನಿರ್ದೇಶಕರು, ಸದಸ್ಯರು ಹಾಜರಿದ್ದರು

LEAVE A REPLY

Please enter your comment!
Please enter your name here