ವಿಶ್ವಕರ್ಮ ಪೂಜೆ ಮತ್ತು ಯಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಹರೀಶ್ ಪೂಂಜಾ​

0

ಬೆಳ್ತಂಗಡಿ: ತಾಲೂಕಿನ ವಿವಿಧೆಡೆ ನಡೆದ ವಿಶ್ವಕರ್ಮ ಪೂಜೆ ಹಾಗೂ ವಿಶ್ವಕರ್ಮ ಯಜ್ಞ ಕಾರ್ಯಕ್ರಮಗಳಲ್ಲಿ ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರು ಭಾಗವಹಿಸಿ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿದರು.​ವಿ

ಶ್ವಕರ್ಮಾಭ್ಯುದಯ ಸಭಾ ಲಾಯಿಲ, ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ ಮಡಂತ್ಯಾರು ಹಾಗೂ ನಾರಾವಿ ಇವರ ಜಂಟಿ ವತಿಯಿಂದ ಈ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಈ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ಶಾಸಕರು, ಸಮುದಾಯದ ಪ್ರಮುಖರೊಂದಿಗೆ ಬೆರೆತು ಶುಭ ಹಾರೈಸಿದರು.​

ಕಾರ್ಯಕ್ರಮದಲ್ಲಿ ಸ್ಥಳೀಯ ಗಣ್ಯರು, ಸಮುದಾಯದ ಮುಖಂಡರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

LEAVE A REPLY

Please enter your comment!
Please enter your name here