ಪ್ರಧಾನಿ ನರೇಂದ್ರ ಮೋದಿಯವರ 76ನೇ ಹುಟ್ಟುಹಬ್ಬ: ಇಂದಬೆಟ್ಟು ಗ್ರಾಮದ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ವಿಶೇಷ ಪ್ರಾರ್ಥನೆ

0

ಇಂದಬೆಟ್ಟು: ವಿಶ್ವ ನಾಯಕ, ಭಾರತದ ಜನಪ್ರಿಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 76ನೇ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ ಬಿಜೆಪಿ ಇಂದಬೆಟ್ಟು ಶಕ್ತಿ ಕೇಂದ್ರದ ವತಿಯಿಂದ ಗ್ರಾಮದ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಅವರ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಹಾಗೂ ರಾಷ್ಟ್ರಸೇವೆಗೆ ಮತ್ತಷ್ಟು ಶಕ್ತಿ ಸಿಗಲೆಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.​

ಈ ಪುಣ್ಯ ಕಾರ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭ ಹಾರೈಸಿದರು.

​ವಿಶೇಷ ಪೂಜೆ ಸಲ್ಲಿಸಿದ ಪ್ರಮುಖ ಕ್ಷೇತ್ರಗಳು:​ಮಹಮ್ಮಾಯಿ ಮಾರಿಗುಡಿ, ಬೆದ್ರಬೆಟ್ಟು ಕ್ಷೇತ್ರ​ಬಂಗಾಡಿ ಮಹಾ ಗಣಪತಿ ದೇವಸ್ಥಾನ ಹಾಗೂ ಸಹಸ್ರ ನಾಗಬನ ಕ್ಷೇತ್ರ​ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನ​ಬಂಗಾಡಿ ಶಾಂತಿನಾಥ ಸ್ವಾಮಿ ಬಸದಿ ಕ್ಷೇತ್ರ​ಶ್ರವಣ ಗುಂಡ ಕ್ಷೇತ್ರ​ಮಹಮ್ಮಾಯಿ ಮಾರಿಗುಡಿ, ಕಲ್ಲಾಜೆ ಶಾಂತಿನಗರ ಕ್ಷೇತ್ರ​ಉಳ್ಳಾಕುಳ ಮೂಲಸ್ಥಾನ ಶ್ರೀ ಕ್ಷೇತ್ರ, ಕರುವಳ್ಳ ಕಲ್ಲಗುಂಡ ಕ್ಷೇತ್ರ​ಈ ಎಲ್ಲಾ ಕ್ಷೇತ್ರಗಳಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರಾರ್ಥನೆಗಳನ್ನು ನೆರವೇರಿಸಲಾಯಿತು.

LEAVE A REPLY

Please enter your comment!
Please enter your name here