






ಶಿಶಿಲ: ಶ್ರೀ ಶಿಶಿಲೇಶ್ವರ ದೇವರ ಸನ್ನಿಧಿಯಲ್ಲಿ ದೇವಸ್ಥಾನದ ಅಷ್ಟಮಂಗಲ ಪ್ರಶ್ನಾ ಚಿಂತನೆಯು ವೇದಮೂರ್ತಿ ನಾಗೇಶ್ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯಿತು.
ಬೈಲೂರು ಉಡುಪಿಯ ದೈವಜ್ಞ ಮುರಳಿಧರ ತಂತ್ರಿ ಅವರ ನೇತೃತ್ವದಲ್ಲಿ, ಶ್ರೀನಿವಾಸ್ ಭಟ್ ಉಡುಪಿ ಹಾಗೂ ಶ್ರೀನಿಧಿ ಮುಚ್ಚಿಣ್ಣಾಯ ಕಾರಿಂಜಾ ಅವರ ಉಪಸ್ಥಿತಿಯಲ್ಲಿ ವಿಶೇಷ ಅಷ್ಟಮಂಗಲ ಪ್ರಶ್ನಾ ಚಿಂತನೆ ನೆರವೇರಿತು.


ಪ್ರಶ್ನಾ ಚಿಂತನೆಯಲ್ಲಿ ದೇವಾಲಯದ ಪರಿಸರ, ದೇವರು ಹಾಗೂ ದೈವಗಳ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಉತ್ತಮ ಅಂಶಗಳು ಹಾಗೂ ಕೆಲವೊಂದು ದೋಷಗಳು ಕಂಡುಬಂದಿದ್ದು, ಅವುಗಳನ್ನು ಸರಿಪಡಿಸಲು ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು. ಮುಂದಿನ ದಿನಗಳಲ್ಲಿ ಸೂಚಿಸಲಾದ ಪರಿಹಾರ ಕಾರ್ಯಗಳನ್ನು ನೆರವೇರಿಸಿ, ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ನಡೆಸಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುನಿಲ್ ಗೋಖಲೆ, ಆಡಳಿತ ಮಂಡಳಿ ಸದಸ್ಯರಾದ ರಮೇಶ್ ಗೌಡ,ನಾರಾಯಣ ಪೂಜಾರಿ , ಶ್ರೀಧರ್ ರಾವ್ ಕಾಯಡ, ಸುಂದರ, ವಿಮಲಾ, ಪ್ರೇಮ, ಚೆನ್ನಪ್ಪ ನಳಿಕೆ ಪ್ರಧಾನ ಅರ್ಚಕರಾದ ಶ್ರೀ ರಾಮ ಕಾರಂತ್,ಅಭಿವೃದ್ಧಿ ಸಮಿತಿ ಅಧ್ಯಕ್ಷ ಸೂರಜ್ ನೆಲ್ಲಿತ್ತಾಯ,ವಿಶ್ವಾನಾಥ್ ಪೂಜಾರಿ ಕೊಂಬಾರ್, ದೇವಳದ ಮಾಜಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯರಾಮ ನೆಲ್ಲಿತ್ತಾಯ, ಯೋಗೀಶ್ ದಾಮ್ಲೆ, ಅನಂತ ದಾಮ್ಲೆ, ಗಣೇಶ್ ಗೌಡ, ಕೊರಗಪ್ಪ ಗೌಡ, ರಾಜಾರಾಮ್ ಶಿಶಿಲ, ಶಶಾಂಕ್ ನೆಲ್ಲಿತ್ತಾಯ, ರಾಜು ಗೋಖಲೆ, ಗಣೇಶ್ ಗೌಡ ಧರ್ಮದಕಳ ಸೇರಿದಂತೆ ಊರಿನ ಗಣ್ಯರು ಹಾಗೂ ಭಕ್ತವೃಂದ ಉಪಸ್ಥಿತರಿದ್ದರು.









