






ನರೇಂದ್ರ ಮೋದಿಜಿ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರಿಗೆ ಆಯುಷ್ಯ ಆರೋಗ್ಯ ಕೋರಿ ಮಡಂತ್ಯಾರಿನ ಗಣೇಶೋತ್ಸವದ ಶ್ರೀ ಗಣಪತಿ ಮಂಟಪದಲ್ಲಿ ಪೂಜೆ ಸಲ್ಲಿಸಲಾಯಿತು.


ಬಿಜೆಪಿ ಬೆಳ್ತಂಗಡಿ ಮಂಡಳ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಪಾರೆಂಕಿ , ಪಕ್ಷದ ಪ್ರಮುಖರಾದ ವಿಶ್ವನಾಥ್ ಪೂಜಾರಿ, ಶಕ್ತಿ ಕೇಂದ್ರದ ಪ್ರಮುಖರಾದ ಕಾಂತಪ್ಪ ಗೌಡ , ತಾಲೂಕು ಮಹಿಳಾ ಮೋರ್ಚಾದ ಕೋಶಾಧಿಕಾರಿ ಸಂಗೀತ ಶೆಟ್ಟಿ ಹಾಗೂ ಪಾರೆಂಕಿ ಶಕ್ತಿ ಕೇಂದ್ರದ ಎಲ್ಲಾ ಕಾರ್ಯಕರ್ತರು ಹಾಜರಿದ್ದರು.









