







ಕೊಕ್ಕಡ: ಕಡಬ ತಾಲೂಕಿನ ಕೌಕ್ರಡಿ ಗ್ರಾಮದ ಪೆಲತ್ತಿಂಜ ನಿವಾಸಿ, ಹಲವು ವರ್ಷಗಳ ಹಿಂದೆ ಹಿಂದುಪರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಪಚ್ಚು ಕೊಕ್ಕಡ ಅವರ ತಾಯಿ ಹೊನ್ನಮ್ಮ ಅವರಿಗೆ ಟೀಮ್ ಭವಾನಿ ತಂಡದ ಪ್ರಥಮ ಸೇವಾ ಯೋಜನೆಯಡಿ ಧನಸಹಾಯ ನೀಡಲಾಯಿತು.


ಸೆ.16ರಂದು ಹೊನ್ನಮ್ಮ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡುಗೈ ದಾನಿ ಗಣೇಶ್ ಗೌಡ ಕಲಾಯಿ ಅವರ ಮೂಲಕ ಟೀಮ್ ಭವಾನಿ ತಂಡದ ಸದಸ್ಯರ ಸಮ್ಮುಖದಲ್ಲಿ ರೂ.70,910 ಮೊತ್ತವನ್ನು ಹಸ್ತಾಂತರಿಸಲಾಯಿತು.









