ಎಲ್.ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

0

ಕಕ್ಯ ಪದವು : ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯನ್ ಎಜುಕೇಶನ್ ಟ್ರಸ್ಟ್ (ರಿ ) ನಿಂದ ನಡೆಸಲ್ಪಡುವ ಎಲ್.ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಸೆ.16ರಂದು ಪದವಿಪೂರ್ವ ಹಾಗೂ ಪದವಿ ವಿಭಾಗದ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ ಹಾಗೂ ಗೌರವದಿಂದ ಏರ್ಪಡಿಸಲಾಯಿತು.

ಭಾರತದ ಮಾಜಿ ರಾಷ್ಟ್ರಪತಿ ಡಾ II ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಅವರ ಸವಿನೆನಪಿಗಾಗಿ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜು ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಸಂಯೋಜಿಸಿದರು.

ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ ಹಾಗೂ ಸಂಯೋಜಕರಾದ ಯಶವಂತ್ ಜಿ.ನಾಯಕ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಿ, ಅಧೀಕೃತ ಚಾಲನೆ ನೀಡಿದರು.

ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ ಮಾತನಾಡಿ ಇವರು ಉಪನ್ಯಾಸಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳನ್ನು ತಿಳಿಸಿದರು. ಹಾಗೂ ಜೀವನದಲ್ಲಿ ಶಿಸ್ತು ಪರಿಶ್ರಮ ಮತ್ತು ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ ಸಲಹೆಯನ್ನು ನೀಡಿ ಶುಭಾಶಯ ತಿಳಿಸಿದರು.

ಸಂಯೋಜಕರಾದ ಯಶವಂತ ಜಿ ನಾಯಕ್ ಇವರು ಮಾತನಾಡಿ ಶುಭಾಶಯದೊಂದಿಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶಿಕ್ಷಣದ ಮಹತ್ವ ಹಾಗೂ ಶಿಕ್ಷಕರ ಬಾಂಧವ್ಯದ ಕುರಿತು ಮತ್ತು ಸಂಸ್ಥೆಯಲ್ಲಿ ದುಡಿಯುವ ಶಿಕ್ಷಕರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು.

ಪದವಿ ವಿಭಾಗದ ಮುಖ್ಯಸ್ಥರಾದ ದೀಕ್ಷಿತಾ ಎಸ್, ಪದವಿಪೂರ್ವ ವಿಭಾಗದ ಮುಖ್ಯಸ್ಥರಾದ ಸೌಮ್ಯ ಎನ್, ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಚೈತ್ರಾ ಎ.ವಿ, ಜಯಾಶ್ರೀ , ಕನ್ನಡ ಉಪನ್ಯಾಸಕಿ ವಿಂದ್ಯಾಶ್ರೀ ಎ ಇವರೆಲ್ಲರೂ ಮಾತನಾಡಿ ವೃಕ್ತಿತ್ವ ,ಆದರ್ಶ ಹಾಗೂ ತತ್ವಗಳನ್ನು ವಿದ್ಯಾರ್ಥಿಗಳೆಲ್ಲರೂ ಮೈಗೂಡಿಸಿಕೊಂಡು ಶಿಕ್ಷಕರನ್ನು ಸದಾ ಗೌರವದಿಂದ ಕಾಣಬೇಕು ಎಂದು ಹಿತನುಡಿಗಳನ್ನಾಡಿದರು.

ವಿದ್ಯಾರ್ಥಿಗಳು ಹಾಡು ಹಾಗೂ ನೃತ್ಯದ ಮೂಲಕ ಮನರಂಜಿಸಿ, ಎಲ್ಲಾ ಬೋಧಕ ಹಾಗೂ ಬೋಧಕೇತರ ವರ್ಗದವರಿಗೆ ಒಳಾಂಗಣ, ಹೊರಾಂಗಣ ಕ್ರೀಡಾ ಸ್ಪರ್ಧೆಯನ್ನು ಏರ್ಪಡಿಸಿ ಮನರಂಜಿಸಿದರು.

ಪ್ರಥಮ ಪದವಿ ವಿಭಾಗದ ಅನನ್ಯ ಸ್ವಾಗತಿಸಿ, ದ್ವಿತೀಯಾ ಪಿ.ಯು.ಸಿ ಚೈತ್ರಾ ಯು.ಎಸ್ ವಂದಿಸಿ , ಅಂತಿಮ ಪದವಿ ವಿಭಾಗದ ರಾಫಿಯಾ ಹಾಗೂ ಅಝ್ಮಿಯಾ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here