ಕಾಶಿಪಟ್ಣದಲ್ಲಿ ಜರುಗಿದ ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಹಿದಾಯತುಲ್ ಇಸ್ಲಾಂ ಮದ್ರಸದ ಪ್ರಾರ್ಥನಾ ದಿನ

0

​ಕಾಶಿಪಟ್ಣ: ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಹಿದಾಯತುಲ್ ಇಸ್ಲಾಂ ಮದ್ರಸ ಕಾಶಿಪಟ್ಣ ಇದರ ವತಿಯಿಂದ, ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ನ ನಿರ್ದೇಶನದಂತೆ ಸೆಪ್ಟೆಂಬರ್ 13, ಆದಿತ್ಯವಾರ ಬೆಳಿಗ್ಗೆ 7 ಗಂಟೆಗೆ ಹಿದಾಯತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ಪ್ರಾರ್ಥನಾ ದಿನವನ್ನು ಅತ್ಯಂತ ಧಾರ್ಮಿಕ ಭಾವನೆಯೊಂದಿಗೆ ಆಚರಿಸಲಾಯಿತು.​

ಸ್ಥಳೀಯ ಖತೀಬರಾದ ಎಸ್.ಎ. ಅಬೂಬಕ್ಕರ್ ನಿಝಾಮಿ ಅಲ್ ರಾಶಿದಿ ಅವರು ಪ್ರಾರ್ಥನೆಗೈಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ಕೆ.ಎಸ್.ಬಿ.ವಿ. ಅಧ್ಯಕ್ಷರಾದ ಕೆ.ಎಸ್. ಅಹ್ಮದ್ ಸಿಹಾಮ್ ಸ್ವಾಗತ ಕೋರಿದರು. ಬಳಿಕ ಮದ್ರಸ ಮುಹಲ್ಲಿಮರಾದ ಅಕ್ಬರ್ ಅಲಿ ಅಝ್ಹರಿ ಅವರು ಖಬರ್ ಝಿಯಾರತಿಗೆ ನೇತೃತ್ವ ನೀಡಿದರು.​

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಜೆ.ಎಂ. ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಎಚ್. ಅಬ್ದುಲ್ ರಹಿಮಾನ್ ವಹಿಸಿದ್ದರು.​ವೇದಿಕೆಯಲ್ಲಿ ಹಾಗೂ ಸಭೆಯಲ್ಲಿ ಮದ್ರಸದ ಮಾಜಿ ಅಧ್ಯಕ್ಷರಾದ ಕೆ.ಎಸ್. ಪುತ್ತು ಮೋನು, ಕೋಶಾಧಿಕಾರಿ ಶಬೀರ್ ಅಹ್ಮದ್, ಆಡಳಿತ ಸಮಿತಿ ಸದಸ್ಯರಾದ ಅಬ್ದುಲ್ ರಹಿಮಾನ್ ಹಾಜಿ, ಸಿದ್ದೀಖ್ ಆಟೋ, ಗಫೂರ್ ಸಾಹೇಬ್, ಯೂಸುಫ್ ಹಾಜಿ, ಅಬೂಸ್ವಾಲಿಯಾಕ ಹಾಗೂ ಹೋಟೆಲ್ ಫೈವ್ ಸ್ಟಾರ್ ಮಾಲಕರಾದ ಶಂಸುದ್ದೀನ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಮದ್ರಸದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.​ಕಾರ್ಯಕ್ರಮದ ಕೊನೆಯಲ್ಲಿ ನೆರೆದಿದ್ದವರಿಗೆ ತಬರ್ರುಖ್ (ಸೀರಣಿ) ವಿತರಿಸಲಾಯಿತು. ಎಸ್.ಕೆ.ಎಸ್.ಎಸ್.ಎಫ್. ಕಾಶಿಪಟ್ಣ ಶಾಖೆ ಅಧ್ಯಕ್ಷರಾದ ಅಬ್ದುಲ್ ಹಮೀದ್ ವಂದನಾರ್ಪಣೆಗೈದರು. ಅಂತಿಮವಾಗಿ ಮೂರು ಸ್ವಲಾತ್‌ಗಳನ್ನು ಪಠಿಸುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here