






ಮರೋಡಿ: ಪಿಜತ್ತಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 30ನೇ ವರ್ಷದ ಶ್ರೀ ಗಣೇಶೋತ್ಸವ ಸೆ.14ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ವೇದಮೂರ್ತಿ ಅನಂತ ಆಸ್ರಣ್ಣ ಕೇಳ ಬೊಟ್ಟ ಅವರ ಪೌರೋಹಿತ್ಯದಲ್ಲಿ ಬೆಳಗ್ಗೆ 6ಗಂಟೆಗೆ ಶ್ರೀ ಮಹಾಗಣಪತಿ ದೇವರ ವಿಗ್ರಹ ಪ್ರತಿಷ್ಠಾಪನಾ ಪೂಜೆ, ಬೆಳಗ್ಗೆ 7 ಗಂಟೆಗೆ ಜುಮಾದಿ, ಅಣ್ಣಪ್ಪ, ಪಂಜುರ್ಲಿ ದೈವಗಳಿಗೆ ಪರ್ವಸೇವೆ, 7.30ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಹಾಗೂ 8 ಗಂಟೆಯಿಂದ ಅಥರ್ವಶೀರ್ಷ ಗಣಯಾಗ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಪೂರ್ಣಾಹುತಿ ಹಾಗೂ ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನೆರವೇರಲಿದೆ. ಬಳಿಕ ಅನ್ನದಾನ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 1.30ರಿಂದ ನೃತ್ಯ ವಿಕಾಸ ಮೂಡಬಿದಿರೆ ಇವರಿಂದ ನೃತ್ಯ ವೈವಿಧ್ಯ, 2.30ರಿಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸ್ಥಳೀಯ ಮಕ್ಕಳು ಮತ್ತು ಮಹಿಳೆಯರಿಂದ ನೃತ್ಯ ಕಾರ್ಯಕ್ರಮ ಹಾಗೂ 3.30ರಿಂದ ಹಿಪ್ ಬಾಯ್ಸ್ ನೃತ್ಯ ತಂಡ ಉಜಿರೆ ಇವರಿಂದ ನೃತ್ಯ ವೈವಿಧ್ಯ ನಡೆಯಲಿದೆ.
ಸಭಾ ಕಾರ್ಯಕ್ರಮ: ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೇಳ ಕಾಶಿಪಟ್ಣ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇದಮೂರ್ತಿ ಅನಂತ ಅಸ್ರಣ್ಣ ಶುಭಾಶೀರ್ವಾದ ನೀಡಲಿದ್ದು ಮೂಡಬಿದಿರೆಯ ಧನಲಕ್ಷ್ಮೀ ಉದ್ಯಮ ಸಮೂಹದ ಕೆ. ಶ್ರೀಪತಿ ಭಟ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಿಜತ್ತಕಟ್ಟೆ ಇದರ ಅಧ್ಯಕ್ಷ ಸುರೇಶ್ ಅಂಚನ್ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಶಾಸಕ ಹರೀಶ್ ಪೂಂಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ಧಾರ್ಮಿಕ ಮುಖಂಡ ಕಿರಣ್ಚಂದ್ರ ಪುಷ್ಪಗಿರಿ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಗೌರವ ಉಪಸ್ಥಿತರಿರುವರು. ಬಜ್ಪೆ ನಗರಸಭೆ ಅಧ್ಯಕ್ಷ ಲೋಕೇಶ್ ಪೂಜಾರಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉಡುಪಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನ ಕರಾವಳಿ ಪ್ರಾದೇಶಿಕ ಕಚೇರಿಯ ನಿರ್ದೇಶಕ ಆನಂದ ಸುವರ್ಣ, ಪೆರಾಡಿ ವ್ಯವಸಾಯ ಬ್ಯಾಂಕ್ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ಎಕ್ಸೆಲ್ ಪಿಯು ಕಾಲೇಜು ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಮುಂಬೈ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಮರೋಡಿ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ, ಮರೋಡಿ ಅಂಗಡಿಬೆಟ್ಟು ಗುತ್ತು ಜಯರಾಜ್ ಕಾಬಯ, ಮರೋಡಿ ಉಮಾಮಹೇಶ್ವರಿ ದೇವಸ್ಥಾನದ ಕಾರ್ಯದರ್ಶಿ ಜಯಂತ್ ಕೋಟ್ಯಾನ್, ಮೂಡಬಿದಿರೆ ಫಾರ್ಚುನ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ನ ಅಬುಲ್ ಅಲಾ ಪುತ್ತಿಗೆ, ಮುಂಬೈ ಉದ್ಯಮಿ ಹರಿ ಮೀನಾಕ್ಷಿ ದೋಟದ ಸುರೇಶ್ ಶೆಟ್ಟಿ ಮಿಜಾರು, ಬೆಳ್ತಂಗಡಿಯ ಮಕ್ಕಳ ತಜ್ಞೆ ಡಾ. ದೀಕ್ಷಿತಾ, ಮೂಡಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಹಾಗೂ ಶಿರ್ತಾಡಿ ಪ್ರಭಾ ಕ್ಲಿನಿಕ್ನ ಡಾ. ಆಶೀರ್ವಾದ್, ಮೂಡಬಿದಿರೆ ರುದ್ರಾಂಶ ಬಿಲ್ಡರ್ಸ್ ಆಂಡ್ ಡೆವಲಪರ್ಸ್ನ ಅಜಯ್ ಶೆಟ್ಟಿ, ರಾಜ್ಯ ರೆಡ್ ಆಶ್ಲಿನ್ ಮೋಟಾರ್ಸ್ ತ್ರಿಶೂರ್ ನಿರ್ದೇಶಕ ರಾಜಮೋನ್ ಮಿಥಲ್ ಸೇಲ್ಸ್, ಮೂಡಬಿದಿರೆ ಆಳ್ವಾಸ್ನ ಮಕ್ಕಳ ತಜ್ಞೆ ಡಾ. ಶ್ರೀರಕ್ಷಾ, ಸಿದ್ಧಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಅಧ್ಯಕ್ಷ ಕಿರಣ್ ಮಂಜಿಲ, ಬೆಂಗಳೂರಿನ ಉದ್ಯಮಿ ದಯಾನಂದ ಪೂಜಾರಿ ಹಾಗೂ ಎಚ್ಡಿಎಫ್ಸಿ ಬ್ಯಾಂಕ್ ವಿಭಾಗ ಪ್ರಬಂಧಕ ರವೀಂದ್ರ ಪೂಜಾರಿ ಭಾಗವಹಿಸಲಿದ್ದಾರೆ.


ಸಮಿತಿಯಿಂದ ಸಿದ್ಧತೆ: ಗಣೇಶೋತ್ಸವದ ಯಶಸ್ಸಿಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುರೇಶ್ ಅಂಚನ್ ಅಟ್ಟಬೆಟ್ಟು, ಪ್ರಧಾನ ಕಾರ್ಯದರ್ಶಿ ನಿವೃತ್ತ ಪ್ರಾಂಶುಪಾಲ ಚಂದ್ರಶೇಖರ ದೇವಾಡಿಗ ಮುಡಾಯಿನಡೆ, ಕಾರ್ಯದರ್ಶಿ ವಿಶ್ವನಾಥ ಬಂಗೇರ, ಗೌರವಾಧ್ಯಕ್ಷ ಮಹಾಬಲ ಪೂಜಾರಿ ಹಜಂಕನಿ, ಉಪಾಧ್ಯಕ್ಷರಾದ ರಮೇಶ್ ಪೂಜಾರಿ ನೀರಲ್ಕೆ ಹಾಗೂ ರಾಜು ಸಾಲಿಯಾನ್ ಹೆಟ್ಲೊಟ್ಟು, ಕೋಶಾಧಿಕಾರಿ ನಾರಾಯಣ ಪೂಜಾರಿ ಮೇಗಿನಹಿತ್ತಿಲು, ಜೊತೆ ಕಾರ್ಯದರ್ಶಿ ಅರುಣ್ ಬಂಗೇರ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಹಾಗೂ ಪಿಜತ್ತಕಟ್ಟೆ-ಮರೋಡಿ ಊರಿನ ಸಮಸ್ತರು ಸಿದ್ಧತೆ ನಡೆಸುತ್ತಿದ್ದಾರೆ. ಪಿಜತ್ತಕಟ್ಟೆಯ ಶ್ರೀ ಗುರು ಮಿತ್ರ ಹವ್ಯಾಸಿ ಬಳಗ, ಅಯ್ಯಪ್ಪ ಭಕ್ತ ವೃಂದ, ವಿಘ್ನೇಶ್ವರ ಬಿಲ್ಲವ ಮಹಿಳಾ ಸಂಘ, ಶ್ರೀ ಗುರು ಭಜನಾ ಮಂಡಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮರೋಡಿ ವಿಭಾಗ, ಮರೋಡಿ ಬರ್ಕೆಯ ವಿವೇಕಾನಂದ ಫ್ರೆಂಡ್ಸ್ ಹಾಗೂ ಮರೋಡಿ ಹಾಲು ಉತ್ಪಾದಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿವೆ.
ವೈಭವದ ಶೋಭಾಯಾತ್ರೆ: ಗಣೇಶೋತ್ಸವದ ಪ್ರಮುಖ ಆಕರ್ಷಣೆಯಾಗಿ ಮಧ್ಯಾಹ್ನ 3 ಗಂಟೆಗೆ ಮರೋಡಿಯ ಪಿಲಿ ತಂಡದಿಂದ ಆಕರ್ಷಕ ಪಿಲಿಏಸ ನಡೆಯಲಿದೆ. ಸಂಜೆ 4.30ರಿಂದ ಪ್ರಕಾಶ್ ತೂಮಿನಾಡು ಹಾಗೂ ದೀಪಕ್ ರೈ ಪಾಣಾಜೆ ನೇತೃತ್ವದ ಕಾಂತಾರ ಚಲನಚಿತ್ರ ತಂಡದಿಂದ ತೆಲಿಕೆ ಬಂಜಿ ನಿಲಿಕೆ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.ಸಂಜೆ 6.30ರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಕಲಾವಿದೆರ್ ಕುಳಾಯಿ ಕುಡ್ಲ ಇವರಿಂದ ಪರಮಾತ್ಮೆ ಪಂಜುರ್ಲಿ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ. ರಾತ್ರಿ ಕೇರಳದ ಪ್ರಸಿದ್ಧ ತಂಡದಿಂದ ನಾಟಕ ಪ್ರದರ್ಶನ ನಡೆಯಲಿದೆ. ರಾತ್ರಿ 10 ಗಂಟೆಗೆ ಕರ್ನಾಟಕ, ಕೇರಳ ರಾಜ್ಯಗಳ ಪ್ರಸಿದ್ಧ ತಂಡಗಳು ಹಾಗೂ ಮಂಗಳೂರು ಪಿಲಿ ತಂಡದ ಸಹಭಾಗಿತ್ವದಲ್ಲಿ ವೈಭವದ ಶೋಭಾಯಾತ್ರೆ ನಡೆಯಲಿದೆ.
5 ಸಾವಿರಕ್ಕೂ ಅಧಿಕ ಭಕ್ತರ ನಿರೀಕ್ಷೆ: ಮರೋಡಿ ನಮ್ಮ ತಾಲೂಕಿನ ಕುಗ್ರಾಮ. ಇದೀಗ ಅಭಿವೃದ್ಧಿ ಕಾಣುತ್ತಿರುವ ಈ ಭಾಗದಲ್ಲಿ ವಿಶೇಷವಾದುದನ್ನು ಮಾಡಬೇಕು ಎಂಬ ಉದ್ದೇಶದಿಂದ ಈ ಬಾರಿ 30ನೇ ವರ್ಷದ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದೇವೆ. ಲೋಕಕಲ್ಯಾಣಕ್ಕಾಗಿ ಅಥರ್ವಶೀರ್ಷ ಗಣಯಾಗ ನಡೆಸಲಿದ್ದು ಗಣೇಶನ ವೈಭವದ ಶೋಭಾಯಾತ್ರೆ ನಡೆಯಲಿದೆ. ರಾಜ್ಯದಲ್ಲಿ ಎಲ್ಲಿಯೂ ಆಗದಂತಹ ವಿಶಿಷ್ಟ ಗಣೇಶೋತ್ಸವ ಇಲ್ಲಿ ನಡೆಯಲಿದೆ ಎಂಬ ವಿಶ್ವಾಸವಿದೆ. ಗಣೇಶನ ಅನುಗ್ರಹ ನಮ್ಮ ಮೇಲಿರುವ ನಂಬಿಕೆಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.5 ಸಾವಿರಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆಯಿದೆ.
–ಸುರೇಶ್ ಅಂಚನ್., ಅಧ್ಯಕ್ಷರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ
ಪಿಜತ್ತಕಟ್ಟೆ ಭಕ್ತಾದಿಗಳು ಸಹಕರಿಸಬೇಕು: 29 ವರ್ಷಗಳಿಂದ ಮರೋಡಿಯಲ್ಲಿ ಗಣೇಶೋತ್ಸವ ನಡೆಯುತ್ತಾ ಬಂದಿದೆ. ಈ ಬಾರಿ ಸುರೇಶ್ ಅಂಚನ್ ಹಾಗೂ ಸಂಘಟಕರು ಸೇರಿ 30ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಅದ್ದೂರಿಯಾಗಿ ನಡೆಸಲು ಸಿದ್ಧತೆ ನಡೆಸುತ್ತಿದ್ದೇವೆ. ನಮ್ಮ ಪ್ರಯತ್ನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಸಹಕರಿಸಬೇಕು.
–ಚಂದ್ರಶೇಖರ್ ದೇವಾಡಿಗ., ಪ್ರಧಾನ ಕಾರ್ಯದರ್ಶಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಿಜತ್ತಕಟ್ಟೆ









