






ಬೆಳ್ತಂಗಡಿ: ಬೆಳ್ತಂಗಡಿ ಸಂತೆ ಕಟ್ಟೆ ರಾಜೀವ್ ಗಾಂಧಿ ವಾಣಿಜ್ಯ ಸಂಕೀರ್ಣದ ಮೊದಲ ಮಹಡಿಯಲ್ಲಿ ಕಾರ್ಯಾಚರಿಸುವ ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆಯು ಸೆ.12ರಂದು ಬೆಳ್ತಂಗಡಿ ಹೊಲಿ ರೀಡಿಮರ್ ಚರ್ಚ್ ಮಿನಿಹಾಲ್ ನಲ್ಲಿ ಸಂಘದ ಅಧ್ಯಕ್ಷ ಲ್ಯಾನ್ಸಿ ಎ.ಪಿರೇರಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬೆಳ್ತಂಗಡಿ ಹೊಲಿ ರಿಡಿಮರ್ ಚರ್ಚ್ ಪ್ರಧಾನ ಧರ್ಮಗುರು ವಾಲ್ಟರ್ ಡಿಮೆಲ್ಲೊ ಆಶೀರ್ವಚನಗೈದರು.ಸಂಘದಲ್ಲಿ ಒಟ್ಟು 752 ಸದಸ್ಯರಿದ್ದು, ರೂ. 18,63,960 ಬಂಡವಾಳ ಹೊಂದಿದೆ. ರೂ. 6.22ಕೋಟಿ ಠೇವಣಿಯೊಂದಿಗೆ, ರೂ 7.40 ಕೋಟಿ ಸಾಲ ವಿತರಿಸಿ ರೂ. 32,07,50,000 ಕೋಟಿ ವ್ಯವಹಾರ ನಡೆಸಿ ರೂ. 8,64,166.40ಲಕ್ಷ ಲಾಭ ಗಳಿಸಿ ಸದಸ್ಯರಿಗೆ ಶೇ.14 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಲ್ಯಾನ್ಸಿ ಎ. ಪಿರೇರಾ ಘೋಷಿಸಿದರು.


ಉಪಾಧ್ಯಕ್ಷ ವಿಲ್ಸನ್ ಜೋರ್ಜ್ ಗೊನ್ಸಾಲ್ವಿಸ್, ನಿರ್ದೇಶಕರಾದ ಜಾನ್ ಅರ್ವಿನ್ ಡಿ’ಸೋಜಾ, ಎಲೋಸಿಯಸ್ ಎಸ್.ಲೋಬೊ, ವಿನ್ಸೆಂಟ್ ಟಿ. ಡಿಸೋಜ, ಜಾನ್ ಆಲ್ವಿನ್ ಪಿಂಟೊ, ಮ್ಯಾಕ್ಸಿಮ್ ಡಿಕೋಸ್ತಾ, ಕು. ತಿಯೋಫಿಲಾ ಡಿಸೋಜ, ಸ್ಟೆಲ್ಲಾ ಫ್ರಾಂಕ್, ಸೆಲಿನ್ ನೊರೊನ್ಹಾ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಐರಿನ್ ಡಿಸೋಜ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ವಿಲ್ಸನ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ನಿರ್ದೇಶಕ ಜಾನ್ ಅರ್ವಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಲಕ್ಕಿ ಕೂಪನ್ ಡ್ರಾ ನಡೆಸಲಾಯಿತು.
ಅತೀ ಶೀಘ್ರದಲ್ಲಿ ಸಂಘಕ್ಕೆ ನೂತನ ಕಟ್ಟಡ ನಿರ್ಮಾಣ : ಲ್ಯಾನ್ಸಿ ಪಿರೇರಾ ಸಂಘಕ್ಕೆ ಕಳೆದ ವರ್ಷದಿಂದ ನೀಡಿದ ಸದಸ್ಯರ ಸಹಕಾರಕ್ಕೆ ಕೃತಜ್ಞತೆಗಳು. ಉತ್ತಮ ರೀತಿಯಲ್ಲಿ ಸಿಬ್ಬಂದಿ ವರ್ಗ ಕಾರ್ಯನಿರ್ವಹಿಸುತ್ತಿದೆ, ನಿರ್ದೇಶಕರು ಕೂಡ ಪೂರ್ಣ ರೀತಿಯ ಸಹಕಾರನೀಡುತ್ತಿದ್ದಾರೆ” ರಾಜ್ಯ ಹೆದ್ದಾರಿ ಕಾಮಗಾರಿ ನಡೆಯುವುದರಿಂದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ತೊಂದ್ರೆ ಅನುಭವಿಸುತ್ತಿದ್ದೇವೆ. ನಿಮ್ಮೆಲ್ಲರ ಸಹಕಾರದಿಂದ ಸಂಘಕ್ಕೆ ಸ್ಥಳ ಖರೀದಿ ಮಾಡಿ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದರು.









