ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈದ್ ಮಿಲಾದ್ ಹಬ್ಬ

0

ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆಪ್ಟೆಂಬರ್ 9ರಂದು ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಜಯ ಕಿರಣ ಪತ್ರಿಕೆಯ ವರದಿಗಾರ ಅಶ್ರಫ್ ಅಲಿ ಕುಞ್ಞಿಯವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಈದ್ ಮಿಲಾದ್ ಹಬ್ಬದ ಹಿನ್ನೆಲೆ ಆಚರಣೆ ಮತ್ತು ಮಹತ್ವವನ್ನು ತಿಳಿಸಿ, ಹಬ್ಬದ ಆಚರಣೆಯ ಜೊತೆಗೆ ದೈವಭಕ್ತಿ , ಗುರುಹಿರಿಯರಿಗೆ ಗೌರವ ನೀಡಿ ಉತ್ತಮ ಮಾನವರಾಗಿ ಬಾಳುವುದಾಗಿದೆ ಎಂದು ನುಡಿದರು.

ಶಾಲಾ ಸಂಚಾಲಕ ಫಾ ವಾಲ್ಟರ್ ಡಿಮೆಲ್ಲೋ ಉತ್ತಮ ಜೀವನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸೌಹಾರ್ದತೆಯಿಂದ ಬಾಳಬೇಕೆಂದರು. ಶಾಲಾ ಮುಖ್ಯೋಪಾಧ್ಯಾಯ ಫಾ ಕ್ಲಿಫರ್ಡ್ ಪಿಂಟೋರವರು ಹಬ್ಬದ ಸಂದೇಶವನ್ನು ನೀಡಿ ಶುಭ ಹಾರೈಸಿದರು.

4ನೇ ಮತ್ತು 6ನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳು ಮನೋರಂಜನಾ ಕಾರ್ಯಕ್ರಮದ ಮೂಲಕ ಹಬ್ಬದ ಮಹತ್ವ ಮತ್ತು ಸಂದೇಶವನ್ನು ಸಾರಿದರು. ವಿದ್ಯಾರ್ಥಿ ಯೂಸುಫ್ ಹಯಾನ್ ಈದ್ ಮಿಲಾದ್ ಹಬ್ಬದ ಮಹತ್ವವನ್ನು ತಿಳಿಸಿದರು. ಸಹಶಿಕ್ಷಕಿ ಅನಿತಾ ಅತಿಥಿ ಪರಿಚಯ ನಡೆಸಿಕೊಟ್ಟರು.

ವಿದ್ಯಾರ್ಥಿಗಳಾದ ರೊವೀನ ಪಿರೇರಾ, ಅನ್ವಿತಾ ಬೆನ್ನಿಸ್, ಆಯೀಶಾ ಶಹ್ಮಾ , ಮಹಮ್ಮದ್ ಅಜ್ಮಲ್, ಅವೀಶ್ ಸಾಲ್ಡಾನ್ಹಾ ಮತ್ತು ಅಲ್ವೀನ ಪಿಂಟೋ ಸ್ವಾಗತಿಸಿದರು. ವೆಲೋನ ಪಿಂಟೋ ಕಾರ್ಯಕ್ರಮ ನಿರ್ವಹಿಸಿದರು.

ಯಾಶ್ರಿಕ್ ರೈ, ಬಿನೋಯ್ ಡಿಸೋಜ , ಫಾತಿಮಾ ಹೈಫಾ,ನೀತನ್ ಡಿಸೋಜ, ರೇಚಲ್ ತಾವ್ರೋ ಮತ್ತು ಏಂಜಲಿನ್ ಡೇಸಾ ವಂದಿಸಿದರು. ಜಿಯಾ ಲೋಬೊ ಮತ್ತು ಸ್ಯಾನ್ಸಿಯಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಮೇರಿ ಸುಜಾ ಮತ್ತು ಅನಿತಾ ಸಹಕರಿಸಿದರು.

LEAVE A REPLY

Please enter your comment!
Please enter your name here