







ಕಣಿಯೂರು: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರಕ್ಕೆ ಪದ್ಮುಂಜ ಶ್ರೀ ನಾಗರಕ್ತೇಶ್ವರಿ ವೆಲ್ಡಿಂಗ್ಸ್ ಮಾಲಕರಾದ ಹರೀಶ್ ಗೌಡ ಅವರು ಸ್ಟೀಲ್ ರೈಲಿಂಗ್ಸ್ ಮತ್ತು ನೇಮ್ ಬೋರ್ಡ್ ಅಳವಡಿಸಿ ಕೊಡುಗೆಯಾಗಿ ನೀಡಿ ಸಹಕರಿಸಿದ್ದಾರೆ.


ಈ ಸಮಾಜಮುಖಿ ಕಾರ್ಯಕ್ಕೆ ಪಾಲನಾ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಧನ್ಯವಾದಗಳನ್ನು ಅರ್ಪಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ.









