






ನಾಲ್ಕುರು ದೇಶಾದ್ಯಂತ ಸಂಚಲನ ಮೂಡಿಸಿರುವ ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ಕುರಿತು ಈಗಾಗಲೇ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ರಾಜ್ಯಗಳಲ್ಲಿ ಭೂಮಿ ಕಳೆದುಕೊಳ್ಳುವ ಜನರು ಭೀತಿಯಿಂದ ಬದುಕು ನಡೆಸುತ್ತಿದ್ದು ಇದರ ವಿರುದ್ಧ ಬೃಹತ್ ಪ್ರತಿಭಟನೆ ಸಹ ನಡೆಸುತ್ತಿದ್ದಾರೆ.


ಕಸ್ತೂರಿ ರಂಗನ್ ವರದಿಯಲ್ಲಿ ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮವೂ ಸೇರಿದ್ದು ಗ್ರಾಮೀಣ ಪ್ರದೇಶದ ಜನ ವಸತಿ ಹೆಚ್ಚಾಗಿರುವ ಮತ್ತು ಕೃಷಿಯನ್ನೇ ನಂಬಿರುವ ಈ ಭಾಗದ ಜನರು ಈ ವರದಿಯಿಂದ ಆತಂಕಗೊಂಡಿದ್ದು ಕಸ್ತೂರಿ ರಂಗನ್ ಯೋಜನೆಯಿಂದ ನಾಲ್ಕೂರು ಗ್ರಾಮವನ್ನು ರದ್ದುಪಡಿಸಬೇಕೆಂದು ಸೆಪ್ಟೆಂಬರ್ 7 ರಂದು ನಾಲ್ಕೂರು ಗ್ರಾಮಸ್ಥರು ಎಲ್ಲಾ ಒಟ್ಟಾಗಿ ಬಳಂಜ ಪಂಚಾಯತ್ ಮತ್ತು ತಾಲೂಕು ತಹಶೀಲ್ದಾರ್ ರವರಿಗೆ ಮನವಿಯನ್ನು ನೀಡುವ ಮೂಲಕ ಬೃಹತ್ ಪ್ರತಿಭಟನೆಯನ್ನು ನಡೆಸುವುದೆಂದು ತೀರ್ಮಾನಿಸಿದ್ದು ಗ್ರಾಮಸ್ಥರೆಲ್ಲರೂ ಆಗಮಿಸಬೇಕಾಗಿ ನಮ್ಮ ಭೂಮಿ ನಮ್ಮ ಹಕ್ಕು ಸಮಿತಿ ನಾಲ್ಕೂರು ಇದರ ಪ್ರಧಾನ ಸಂಚಾಲಕರಾದ ಕರುಣಾಕರ್ ಹೆಗ್ಡೆ ಬೊಕ್ಕಸ ತಿಳಿಸಿದ್ದಾರೆ.
ನಾಲ್ಕೂರು ಗ್ರಾಮವು ಕೃಷಿ ಮತ್ತು ಹೈನುಗಾರಿಕೆಯಲ್ಲಿ ಹೆಸರನ್ನು ಪಡೆದಿದ್ದು ಪಶ್ಚಿಮ ಘಟ್ಟ ಕುದುರೆಮುಖ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ನಾನಿಂಜ ಮಲೆ ರಕ್ಷಿತಾರಣ್ಯವೂ ಸಹ ನಾಲ್ಕೂರು ಗ್ರಾಮದಲ್ಲಿರುವ ಕಾರಣ ಕಸ್ತೂರಿ ರಂಗನ್ ವರದಿಯಲ್ಲಿ ಈ ಗ್ರಾಮ ಸೇರಿರಬಹುದು ಎಂದು ಕೆಲವರ ಅಭಿಪ್ರಾಯವಾಗಿದೆ.









