






ಕಣಿಯೂರು: ಸೆ. 03: ಪದ್ಮುಂಜ ಗಣೇಶ್ ಮೆಡಿಕಲ್ ಮಾಲಕರಾದ ವಿಠಲ್ ಶೆಟ್ಟಿಯವರ ಪುತ್ರ ಮಾಸ್ಟರ್ ಉಜ್ವಲ್ ತಮ್ಮ ಹುಟ್ಟುಹಬ್ಬವನ್ನು ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರದಲ್ಲಿ ವಿಭಿನ್ನವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.



ಈ ವಿಶೇಷ ದಿನದ ಅಂಗವಾಗಿ ಕೇಂದ್ರದ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಗಳನ್ನು ವಿತರಿಸಿ ಸಂಭ್ರಮಿಸಲಾಯಿತು.









