







ಮಾಲಾಡಿ :ಮಹಾತ್ಮಗಾಂಧಿ ಮಾಲಾಡಿ ಗ್ರಾಮ ಪಂಚಾಯತ್ ನ 2026-27ನೇ ಪ್ರಥಮ ಸುತ್ತಿನ ಗ್ರಾಮ ಸಭೆಯು ಸೇ.3ರಂದು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಆಡಳಿತ ಅಧಿಕಾರಿ ಭವನಿಶಂಕರ್ ಎನ್ ಇವರ ಅದ್ಯಕ್ಷತೆಯಲ್ಲಿ ಜರಗಿತು.
ನೋಡೆಲ್ ಅಧಿಕಾರಿಯಾಗಿ ಸಹಕಾರಿ ಇಲಾಖೆಯ ಪ್ರತಿಮಾ ಇವರು ಭಾಗವಹಿಸಿ ಸಭೆಯನ್ನು ನಡೆಸಿಕೊಟ್ಟರು. ಅಭಿವೃದ್ಧಿ ಅಧಿಕಾರಿ ರಾಜಶೇಖರ್ ರೈ ವಾರ್ಡ್ ಸಭೆಯ ನಡವಳಿಗಳು, ವರದಿ, ಲೆಕ್ಕ ಪತ್ರ ಮಂಡಿಸಿದರು.ಇಲಾಕಾಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಮಾಹಿತಿ ನೀಡಿದರು.


ಗ್ರಾಮ ಸಭೆಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಪುನೀತ್ ಕುಮಾರ್, ಮಾಜಿ ಅಧ್ಯಕ್ಷರುಗಳಾದ ಬೇಬಿ ಸುಸನ್ನ, ಬೇಬಿ ಸುವರ್ಣ, ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯ ಕರ್ತರು, ಆಶಾ ಕಾರ್ಯಕರ್ತರು, ಅರೋಗ್ಯ ಕಾರ್ಯಕರ್ತರು, ಗ್ರಾಮಸ್ಥರು ಭಾಗವಹಿಸಿದರು. ಸರ್ವೇ ಇಲಾಖೆಯಲ್ಲಿ ಸಮಯಕ್ಕೆ ಸರಿಯಾಗಿ ಯಾವುವ್ದೆ ಕೆಲಸ ಆಗುವುದಿಲ್ಲ ಎಂದು ಗ್ರಾಮಸ್ಥರು ದೂರಕೊಂಡ ಮೇರೆಗೆ ಎರ್ಡಿಯಲ್ ಗೆ ಪತ್ರ ಬರೆಯುವಂತೆ ವಿ. ಎ ಯವರಿಗೆ ಆಡಳಿತಧಿಕಾರಿ ತಿಳಿಸಿದರು.
ಮಾಲಾಡಿ, ಸೊಂಣಂದೂರು ಗ್ರಾಮದ ಸರ್ವೇ ಸಂಖ್ಯೆ 30/1ರಲ್ಲಿ ಫ್ಲೋಟಿಂಗ್ ಕಳೆದ 15ವರ್ಷ ದಿಂದ ಬಾಕಿ ಇದ್ದು ಈಗ ಫ್ಲೋಟಿಂಗ್ ಗೆ ಬಂದಿದೆ. ಆದರೂ ಅರಣ್ಯ ಇಲಾಖೆ ಅರ್ಜಿ ಕೊಟ್ಟ ಫಲನುಭವಿಗಳ ಸಮಸ್ಯೆ ಬಗೆ ಹರಿಸಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ನಾವುಂಡಾ ರಸ್ತೆಯಲ್ಲಿ ಅರಣ್ಯ ಪ್ರದೇಶದಲ್ಲಿ ಡಂಪಿಂಗ್ ಯಾರ್ಡ್ ಮಾರ್ಪಟ್ಟಿದೆ ಎಂದು ಗ್ರಾಮಸ್ಥರು ದೂರಿದರು.ಸಾರ್ವನಾಜನಿಕರೊಬ್ಬರು ಅರಣ್ಯ ಪ್ರದೇಶವನ್ನು ಅತಿಕ್ರಮಣ ಮಾಡಿದ್ದಾರೆ ಅದಕ್ಕೆ ಕೂಡಲೇ ತಡೆ ನೀಡಬೇಕು ಎಂದು ಗ್ರಾಮ ಸಭೆಯಲ್ಲಿ ಒತ್ತಾಹಿಸಿದರು.
ಮಂಗಗಳ ಉಪಟಳ ಜಾಸ್ತಿ ಯಾಗಿ ಕೃಷಿ ನಾಶ ವಾಗುತ್ತಿದೆ ಅರಣ್ಯ ಇಲಾಖೆ ಸರಕಾರಿ ಖಾಲಿ ಜಗದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಸಹಕರಿಸುವಂತೆ ವಿನಂತಿಸಿದರು.ಊರ್ಲದಲ್ಲಿ ಮೆಸ್ಕಾಂ ಹಳೇ ತಂತಿ ಬದಲಾಹಿಸುವಂತೆ ಮತ್ತು ಜೋತು ಬಿದ್ದ ತಂತಿ, ಪೋಮ್ಮಜೆ ಸಬರಬೈಲು ಅಂಗನವಾಡಿ ಬಳಿ ಇರುವ ಟ್ರಾನ್ಸ್ಪೋರ್ಮರ್ ಸ್ಥಳoತಾರಿಸುವಂತೆ ಗ್ರಾಮಸ್ಥರ ಹಲವು ವರ್ಷದ ಬೇಡಿಕೆಯಾಗಿದ್ದು ಕೂಡಲೇ ಸ್ಪಂದಿಸುವಂತೆ ಅಧಿಕಾರಿಗಳಲ್ಲಿ ವಿನಂತಿಸಿದರು. ಕೆತ್ತಿ ಗುಡ್ಡೆಯಲ್ಲಿ ರಸ್ತೆಯಲ್ಲಿಯೆ ವಿದ್ಯುತ್ ಕಂಬ ಹಾಕಿದ್ದು ತೆರವುಗೊಳಿಸಲು ಕೋರಿಕೆ.









